ಸಿಡ್ನಿ(ಜ.07): ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನ 2-1 ಅಂತರದಲ್ಲಿ ಗೆದ್ದ ಟೀಂ ಇಂಡಿಯಾ ದಾಖಲೆ ಬರೆದಿದೆ. ಟೀಂ ಇಂಡಿಯಾ ಗೆಲುವನ್ನ ಪ್ರದಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ. ಸರಣಿ ಗೆದ್ದ ಖುಷಿಯಲ್ಲಿ ಬಾಲಿವುಡ್ ನಟಿ, ಕಿಂಗ್ಸ್ ಇಲೆವೆನ್ ಪಂಜಾಬ್  ಒಡತಿ ಪ್ರಿತಿ ಜಿಂಟಾ ಅಭಿನಂದನೆ ಸಲ್ಲಿಸಲು ಹೋಗಿ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ದಾಖಲಾದ ಅಪರೂಪದ 10 ಮೈಲಿಗಲ್ಲು!

ಟೀಂ ಇಂಡಿಯಾ ಅಭಿನಂದಿಸೋ ಭರದಲ್ಲಿ ಪ್ರೀತಿ ಜಿಂಟಾ ಟೆಸ್ಟ್ ಸರಣಿ ಬದಲು ಟೆಸ್ಟ್ ಪಂದ್ಯ ಎಂದು ಬರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆ ಎಂದಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆದ್ದಿದೆ.

 

 

ಇದನ್ನೂ ಓದಿ: ಚೇತೇಶ್ವರ್ ಪೂಜಾರ ಯಾಕೆ ಡ್ಯಾನ್ಸ್ ಮಾಡಲ್ಲ-ಕೊಹ್ಲಿ ಹೇಳಿದ್ರು ಸೀಕ್ರೆಟ್!

ಜಿಂಟಾ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಟೆಸ್ಟ್ ಪಂದ್ಯ ಅಲ್ಲ, ಟೆಸ್ಟ್ ಸರಣಿ ಎಂದು ತಿದ್ದಿದ್ದಾರೆ. ಇಷ್ಟೇ ಅಲ್ಲ ಅರ್ಧ ಮಾಹಿತಿ ಯಾವುತ್ತೂ ಭಯಾನಕ ಎಂದು ಸೂಚಿಸಿದ್ದಾರೆ.