ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಡ್ಯಾನ್ಸ್ ಮೂಲಕ ಸಂಭ್ರಮಿಸಿತು. ಸಂಪೂರ್ಣ ಆಟಗಾರರು ಡ್ಯಾನ್ಸ್ ಮಾಡಿದರೆ, ಚೇತೇಶ್ವರ್ ಪೂಜಾರ ಮಾತ್ರ ಡ್ಯಾನ್ಸ್ ಮಾಡಲೇ ಇಲ್ಲ. ಪೂಜಾರ ಡ್ಯಾನ್ಸ್ ಮಾಡಿಲ್ಲ ಯಾಕೆ ಅನ್ನೋದನ್ನ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಸಿಡ್ನಿ(ಜ.7): ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆದ್ದ ಟೀಂ ಇಂಡಿಯಾ ಮೈದಾನದಲ್ಲಿ ವಿಶೇಷ ಡ್ಯಾನ್ಸ್ ಮಾಡಿ ಸಂಭ್ರಮಿಸಿತು. ಅಭಿಮಾನಿಗಳಿಗೆ ಧನ್ಯಾವಾದ ಹೇಳಲು ಕ್ರೀಡಾಂಗಣದ ಸುತ್ತ ಹೆಜ್ಜೆ ಹಾಕಿದ ಟೀಂ ಇಂಡಿಯಾ ಕ್ರಿಕೆಟಿಗರು ವಿಶೇಷ ಡ್ಯಾನ್ಸ್ ಮಾಡಿ ಗಮನಸೆಳೆದರು. ಸಂಪೂರ್ಣ ತಂಡ ಡ್ಯಾನ್ಸ್ ಮಾಡಿ ಸಂಭ್ರಮಿಸಿತು.
ಇದನ್ನೂ ಓದಿ: ಜನವರಿ 8-9ರಂದು ಭಾರತ್ ಬಂದ್: ಏಕೆ? ಯಾರಿಂದ...?
ಆಟಗಾರರ ನಡುವಿನಲ್ಲಿದ್ದ ಚೇತೇಶ್ವರ್ ಪೂಜಾರ ಮಾತ್ರ ಡ್ಯಾನ್ಸ್ ಮಾಡಲಿಲ್ಲ. ಪೂಜಾರಾ ಟೀಂ ಇಂಡಿಯಾ ಇತರ ಆಟಗಾರರು ಎರಡು ಸ್ಟೆಪ್ಸ್ ಹೇಳಿಕೊಟ್ಟರೂ ಪೂಜಾರ ಹರಸಾಹಸ ಪಟ್ಟರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಡ್ಯಾನ್ಸ್ ವಿಶೇಷತೆಯನ್ನ ಬಿಚ್ಚಿಟ್ಟರು.
"
ಇದನ್ನೂ ಓದಿ: ನಟ ಸಿದ್ಧಾರ್ಥ್ ಮಲ್ಹೋತ್ರ ಖರೀದಿಸಿದ ರೇಂಜ್ ರೋವರ್ ಕಾರಿನ ವಿಶೇಷತೆ ಏನು?
ಇದೇ ವೇಳೆ ಪೂಜಾರ ಯಾಕೆ ಡ್ಯಾನ್ಸ್ ಮಾಡೋದಿಲ್ಲ ಅನ್ನೋ ಸೀಕ್ರೆಟ್ ಕೂಡ ಬಹಿರಂಗ ಮಾಡಿದರು. ರಿಷಬ್ ಪಂತ್ ಹಾಕಿದ ಸ್ಟೆಪ್ಸ್ ನಾವೋ ಫಾಲೋ ಮಾಡಿದೆವು. ತುಂಬಾ ಸರಳ ಹೆಜ್ಜೆ ಅದಾಗಿತ್ತು. ಆದರೆ ಪೂಜಾರ ಮಾತ್ರ ಡ್ಯಾನ್ಸ್ ಮಾಡಲಿಲ್ಲ. ಇದಕ್ಕೆ ಪೂಜಾರ ತುಂಬಾ ಸರಳ ವ್ಯಕ್ತಿತ್ವ. ಪೂಜಾರ ನಡೆಯುವಾಗಲೂ ಕೈ ಅಲುಗಾಡಲ್ಲ. ಹೀಗಾಗಿ ಡ್ಯಾನ್ಸ್ ಕೂಡ ಮಾಡಲ್ಲ ಎಂದು ಕೊಹ್ಲಿ ಹೇಳಿದರು.
