ಮುಂಬೈ(ಸೆ.25): ಸತತ ಕ್ರಿಕೆಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ ಮಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿಗೂ ತಯಾರಿ ನಡೆಸಬೇಕಿದೆ. ಇದೀಗ ಬಿಸಿಸಿಐ ಜಿಂಬಾಬ್ವೆ ವಿರುದ್ದದ ಸರಣಿ ರದ್ದಾದ ಬೆನ್ನಲ್ಲೇ, ಶ್ರೀಲಂಕಾ ತಂಡವನ್ನು ಆಹ್ವಾನಿಸಿದೆ. 2020ರ ಹೊಸ ವರ್ಷದ ಆರಂಭದಲ್ಲಿ ಲಂಕಾ ವಿರುದ್ದದ ಸರಣಿಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ!...

ಜಿಂಬಾಬ್ವೆ ತಂಡವನ್ನು ಐಸಿಸಿ ಅಮಾನತು ಮಾಡಿದೆ. ಹೀಗಾಗಿ ಜನವರಿಯಲ್ಲಿ ಆಯೋಜಿಸಿದ್ದ ಭಾರತ ಹಾಗೂ ಜಿಂಬಾಬ್ವೆ ಸರಣಿ ರದ್ದಾಗಿದೆ. ಈ ಅವದಿಯಲ್ಲಿ ಇದೀಗ ಶ್ರೀಲಂಕಾ ವಿರುದ್ಧ ಸರಣಿ ಆಡಲಿದೆ. ಲಂಕಾ ತಂಡವನ್ನು ಆಹ್ವಾನಿಸಿದ ಬಿಸಿಸಿಐಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.