ಧರ್ಮಶಾಲಾ(ಸೆ.15): ಭಾರತ  ಹಾಗೂ  ಸೌತ್ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಟಾಸ್ ಪ್ರಕ್ರಿಯೆ ಕೂಡ ನಡೆಯದೇ ರದ್ದಾಗಿದೆ. ಈ ಮೂಲಕ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಇದೀಗ ಇನ್ನುಳಿದ 2 ಪಂದ್ಯಗಳಲ್ಲಿ ಇದೀಗ ಗೆಲುವು ಯಾರಿಗೆ ಅನ್ನೋದು ನಿರ್ಧಾರವಾಗಬೇಕಿದೆ. ಆದರೆ ಧರ್ಮಶಾಲಾದಲ್ಲಿ ಪಂದ್ಯ ಆಯೋಜಿಸಿದ ಬಿಸಿಸಿಐ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.