ವಿಶಾಖಪಟ್ಟಣಂ(ಸೆ.27): ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯ ನಾಯಕ ವಿರಾಟ್ ಕೊಹ್ಲಿ, ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.  ಇದೇ ವೇಳೆ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಪೋಸ್ಟ್ ಮಾಡಿದ ಕೆಲ ಸೆಕೆಂಡ್‌ಗಳಲ್ಲಿ ಫೋಟೋ ದಾಖಲೆಯ ಲೈಕ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

ವಿರುಷ್ಕಾ ಜೊಡೋ ಸಾಮಾಜಿ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಫೋಟೋ ಶೇರ್ ಮಾಡಿದ ತಕ್ಷಣ ಅಭಿಮಾನಿಗಳ ಕುತೂಹಲಕ್ಕೆ ಫೋಟೋ ವೈರಲ್ ಆಗಿ ವಿಶ್ವದೆಲ್ಲಡೆ ಸದ್ದು ಮಾಡುತ್ತದೆ. ಇದೀಗ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಕಪ್ ಫೋಟೋ ಹಂಚಿಕೊಂಡಿದ್ದಾರೆ.  ಈ ಫೋಟೋಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.

 

 
 
 
 
 
 
 
 
 
 
 
 
 

💞

A post shared by AnushkaSharma1588 (@anushkasharma) on Sep 27, 2019 at 6:54am PDT

ಇದನ್ನೂ ಓದಿ: #INDvSA ಸರಣಿಗೂ ಮುನ್ನ ವಿರುಷ್ಕಾ ರಿಲ್ಯಾಕ್ಸ್; ಬೀಚ್ ಫೋಟೋಗೆ ಫ್ಯಾನ್ಸ್ ಟ್ವೀಟ್ !

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 1-1 ಅಂತರದಲ್ಲಿ ಸಮಬಗೊಳಿಸಿರುವ ಟೀಂ ಇಂಡಿಯಾ ಇದೀಗ 3 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ವಿಶಾಖಪಟ್ಟಣಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಆಕ್ಟೋಬರ್ 2 ರಿಂದ ಆರಂಭವಾಗುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ಗೆಲುವಿನ ವಿಶ್ವಾಸದಲ್ಲಿದೆ.