ಮುಂಬೈ(ಸೆ.11): ವೆಸ್ಟ್ ಇಂಡೀಸ್ ಸರಣಿ ಮುಗಿಸಿದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಕೆರಿಬಿಯನ್ ನಾಡಿನಲ್ಲಿ ಸುತ್ತಾಟ ನಡೆಸಿದ್ದರು.  ಕೆಲ ದಿನಗಳ ಹಿಂದೆ ತವರಿಗೆ ಆಗಮಿಸಿದ ವಿರುಷ್ಕಾ ಜೋಡಿ ಮುಂಬೈನಲ್ಲಿ ತಂಗಿತ್ತು. ಇದೀಗ ಸೌತ್ ಆಫ್ರಿಕಾ ಸರಣಿಗೆ ಕೆಲ ದಿನ ಬಾಕಿ ಇರುವಾಗಲೇ ಸಾಮಾಜಿಕ ಜಾಲತಾಣದಲ್ಲಿನ ಫೋಟೋ ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?

ಬೀಚ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ರಿಲ್ಯಾಕ್ಸ್ ಮೂಡ್ ಫೋಟೋವನ್ನು ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಹಾಟ್ ಫೋಟೋ ನೋಡಿದ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. 

 

ಇದನ್ನೂ ಓದಿ: ಕೋಟ್ಲಾ ಮೈದಾನದಲ್ಲಿ ಕೊಹ್ಲಿ ಸ್ಟ್ಯಾಂಡ್‌ ಉದ್ಘಾಟನೆಗೆ ಕೌಂಟ್‌ಡೌನ್!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಸೆಪ್ಟೆಂಬರ್ 15 ರಿಂದ ಆರಂಭಗೊಳ್ಳುತ್ತಿದೆ. 3 ಟಿ20 ಹಾಗೂ 3 ಟೆಸ್ಟ್ ಪಂದ್ಯದ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ.