ಇಂಗ್ಲೆಂಡ್ ಪ್ರವಾಸದಲ್ಲಿ 3 ಪಂದ್ಯ ಸೋತು ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಪ್ರದರ್ಶನಕ್ಕೆ ಕೋಚ್ ರವಿ ಶಾಸ್ತ್ರಿ ಕಾರಣ ಎಂದಿರುವ ಅಭಿಮಾನಿಗಳು ಅನಿಲ್ ಕುಂಬ್ಳೆಗೆ ಕೋಚ್ ಸ್ಥಾನ ನೀಡಲು ಆಗ್ರಹಿಸಿದ್ದಾರೆ.
ಲಂಡನ್(ಸೆ.04): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮಾರ್ಗದರ್ಶನದ ಟೀಂ ಇಂಡಿಯಾ ವಿದೇಶಿ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಸೌತ್ಆಫ್ರಿಕಾ ಪ್ರವಾಸದ ಬಳಿಕ ಇದೀಗ ಇಂಗ್ಲೆಂಡ್‌ನಲ್ಲೂ ಟೀಂ ಇಂಡಿಯಾ ಸೋಲಿನ ಹಾದಿ ಹಿಡಿದಿದೆ.
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಒಂದೆಡೆ ತಂಡದ ಹೀನಾಯ ಪ್ರದರ್ಶನ ಮತ್ತೊಂದೆಡೆ ಸರಣಿ ಸೋಲು ಅಭಿಮಾನಿಗಳನ್ನ ಕೆರಳಿಸಿದೆ.
ಇಂಗ್ಲೆಂಡ್ ನೆಲದಲ್ಲಿ ಕಳಪೆ ಪ್ರದರ್ಶನಕ್ಕೆ ಕೋಚ್ ರವಿ ಶಾಸ್ತ್ರಿ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ರವಿ ಶಾಸ್ತ್ರಿ ಅಮಾನತು ಮಾಡಿ, ಮತ್ತೆ ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ಆಯ್ಕೆ ಮಾಡಲು ಆಗ್ರಹ ಕೇಳಿಬಂದಿದೆ.
;
