ಮುಂಬೈ(ಸೆ.29): ಎಂ.ಎಸ್.ಧೋನಿ ಬದಲು ಟೀಂ ಇಂಡಿಯಾ ವಿಕೆಟ್ ಕೀಪರ್ ಜವಬ್ದಾರಿ ವಹಿಸಿಕೊಂಡಿರುವ ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಪಂತ್ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. ಇದೀಗ ಟೆಸ್ಟ್ ಸರಣಿಯಲ್ಲಿ ಪಂತ್ ಬದಲು ಇತರ ವಿಕೆಟ್ ಕೀಪರ್‌ಗೆ ಅವಕಾಶ ನೀಡಿ ಅನ್ನೋ ಕೂಗು ಕೇಳಿಬಂದಿದೆ.

ಇದನ್ನೂ ಓದಿ: ಪಂತ್‌ಗೆ ಖಡಕ್‌ ಎಚ್ಚ​ರಿಕೆ ಕೊಟ್ಟ ರವಿ ಶಾಸ್ತ್ರಿ!

ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಬದಲು ದೇಸಿ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಸಂಜು ಸಾಮ್ಸನ್ ಹಾಗೂ ಇಶಾನ್ ಕಿಶನ್‌ಗೆ ಚಾನ್ಸ್ ನೀಡಲು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇನ್ನು ಟೆಸ್ಟ್ ಮಾದರಿಯಲ್ಲಿ ವೃದ್ಧಿಮಾನ್ ಸಾಹ ಉತ್ತಮ ಆಯ್ಕೆ. ಪಂತ್ ದೇಸಿ ಪಂದ್ಯದಲ್ಲಿ ಆಡಿ ಸಾಮರ್ಥ್ಯ ಸಾಬೀತು ಪಡಿಸಲಿ ಎಂದು ಸೂಚಿಸಿದ್ದಾರೆ.