Asianet Suvarna News Asianet Suvarna News

ಹೊಟ್ಟೆಯ ಕ್ಯಾನ್ಸರ್‌ನಿಂದಾಗಿ 29ನೇ ವರ್ಷದಲ್ಲಿಯೇ ಸಾವು ಕಂಡ ಪ್ರಖ್ಯಾತ ವಾಲಿಬಾಲ್‌ ಪ್ಲೇಯರ್‌!

ಅನಾ ಪೌಲಾ ಬೊರ್ಗೊ ಅತ್ಯಂತ ಜನಪ್ರಿಯ ವಾಲಿಬಾಲ್‌ ಆಟಗಾರ್ತಿಯರಲ್ಲಿ ಒಬ್ಬರು. ಎರಡು ವಾರಗಳ ಹಿಂದೆ ಸಾವು ಕಂಡಿರುವ 29 ವರ್ಷದ ತಾರಾ ಆಟಗಾರ್ತಿಗೆ ಹೊಟ್ಟೆಯ ಕ್ಯಾನ್ಸರ್‌ ಆಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.
 

famous volleyball player from Brazil Ana Paula Borgo passed away due to stomach cancer san
Author
First Published May 31, 2023, 12:16 PM IST

ನವದೆಹಲಿ (ಮೇ.31): ಎರಡು ವಾರಗಳ ಹಿಂದೆ ವಾಲಿಬಾಲ್‌ ಕ್ರೀಡಾ ಜಗತ್ತಿಗೆ ಅಚ್ಚರಿ ಎನ್ನುವಂತೆ ವಿಶ್ವದ ಜನಪ್ರಿಯ ಆಟಗಾರ್ತಿಯಲ್ಲಿ ಒಬ್ಬರಾಗಿದ್ದ ಬ್ರೆಜಿಲ್‌ನ ಅನಾ ಪೌಲಾ ಬೊರ್ಗೊ ಅಚ್ಚರಿಯ ರೀತಿಯಲ್ಲಿ ಸಾವು ಕಂಡಿದ್ದರು. ಈಕೆ ಸಾವು ಕಂಡ ಬೆನ್ನಲ್ಲಿಯೇ ಆಕೆಯ ಸಾವಿಗೆ ಕಾರಣವೇನು ತನ್ನುವುದು ತಕ್ಷಣಕ್ಕೆ ಗೊತ್ತಾಗಿರಲಿಲ್ಲ. ಈಗ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಹೊಟ್ಟೆಯ ಕ್ಯಾನ್ಸರ್‌ನಿಂದಾಗಿ ಅನಾ ಪೌಲಾ ಸಾವು ಕಂಡಿದ್ದಾರೆ ಎನ್ನಲಾಗಿದೆ. ಬ್ರೆಜಿಲ್‌ ದೇಶದ ಮಾಜಿ ವಾಲಿಬಾಲ್‌ ಆಟಗಾರ್ತಿ ಮೇ  11 ರಂದು ಸಾವು ಕಂಡಿದ್ದರು. 1993ರ ಅಕ್ಟೋಬರ್‌ 20 ರಂದು ಬೌರುವಿನಲ್ಲಿ ಜನಿಸಿದ್ದ ಅನಾ ಪೌಲಾ ಬೊರ್ಗೊಗೆ ಬಾಲ್ಯದಿಂದಲೇ ಕ್ರೀಡೆ ಅವರ ಜೀವನದ ಭಾಗವಾಗಿ ಹೋಗಿತ್ತು. "2019-2020ರ ಋತುವಿನಲ್ಲಿ ನಮ್ಮ ಕ್ಲಬ್‌ನ ಜರ್ಸಿ ಧರಿಸಿ ಆಡಿದ್ದ ಪೌಲಾ ಬೊರ್ಗೊ ಅವರ ಸಾವಿನಿಂದ ಫ್ಲುಮಿನೆನ್ಸ್ ತೀವ್ರವಾಗಿ ದುಃಖಿತರಾಗಿದೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧ ಬ್ರೆಜಿಲಿಯನ್ ಕ್ಲಬ್‌ ಫ್ಲುಮಿನೆನ್ಸ್ ಬರೆದುಕೊಂಡಿತ್ತು. ಬ್ರೆಜಿಲ್‌ನಲ್ಲಿ ಕ್ಲಬ್‌ ಮಟ್ಟದ ವಾಲಿಬಾಲ್‌ ಮಾತ್ರವಲ್ಲ, ರಾಷ್ಟ್ರೀಯ ತಂಡದಲ್ಲೂ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಈಕೆ, ತಂಡವನ್ನು ಒಲಿಂಪಿಕ್ಸ್‌ನಲ್ಲಿ ಸ್ಮರಣೀಯ ಗೆಲುವುಗಳನ್ನು ದಾಖಲಿಸುವಲ್ಲಿ ನೆರವಾಗಿದ್ದರು. ಪರಿಶ್ರಮ ವಹಿಸಿದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಉದಾಹರಣೆಯಾಗಿ ಅನಾ ಪೌಲಾ ದೇಶದ ಅತ್ಯಂತ ಪ್ರೀತಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಅನಾ ಪೌಲಾ ಬೊರ್ಗೊ ಸಾವಿಗೆ ಕಾರಣವೇನು: 29 ವರ್ಷದ ಅನಾ ಪೌಲಾ ಬೊರ್ಗೊ ಬಹಳ ವರ್ಷಗಳಿಂದ ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅದೇ ಕಾರಣದಿಂದಾಗಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಬ್ರೆಜಿಲ್‌ನ ಬರೂರಿ ಕ್ಲಬ್‌ಗೆ ಸಹಿ ಹಾಕುವ ವೇಳೆ ಎಂದಿನಂತೆ ಆಟಗಾರ್ತಿಯ ವೈದ್ಯಕೀಯ ತಪಾಸಣೆಯನ್ನು ಮಾಡಲಾಗಿತ್ತು. ಈ ವೇಳೆ ಅವರಿಗೆ ಹೊಟ್ಟೆಯ ಕ್ಯಾನ್ಸರ್‌ ಇದೆ ಎನ್ನುವುದು ಖಚಿತವಾಗಿತ್ತು. ಆದರೆ, ಆಕೆಯ ಸಾವಿನ ಬಳಿಕವೇ ಆಕೆಗೆ ಇದ್ದ ಕಾಯಿಲೆ ಇಷ್ಟು ಗಂಭೀರ ಪ್ರಮಾಣದಲ್ಲಿತ್ತು ಎನ್ನುವುದು ಅರಿವಾಗಿದೆ.

2020ರಲ್ಲಿ ಫ್ಲುಮಿನೆನ್ಸ್  ಕ್ಲಬ್‌ ತೊರೆದಿದ್ದ ಬ್ರೆಜಿಲ್‌ನ ಸಸ್ಟಾರ್‌ ಆಟಗಾರ್ತಿ ಟರ್ಕಿಗೆ ತೆರಳಿದ್ದರು. ಅಲ್ಲಿ ಅವರು ಕೇಲ್ ಮತ್ತು ನಿಲುಫರ್ ಬೆಲೆಡಿಯೆಸ್ಪೋ ಪರವಾಗಿ ಆಡಿದ್ದರು. ಆ ಬಳಿಕ, ಬೊರ್ಗೊ, ಇಟಲಿಯ ಬೆರ್ಗಾಮೋ ಕ್ಲಬ್‌ ಪರವಾಗಿ ಆಡಿದ್ದ ಅನಾ ಪೌಲಾ ಬೊರ್ಗೋ ಬಹಳ ವರ್ಷಗಳ ನಂತರ ಬರೂರಿ ಕ್ಲಬ್‌ ಮೂಲಕ ಸ್ವದೇಶಕ್ಕೆ ವಾಪಸಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಆಕೆಯ ವೃತ್ತಿಜೀವನದಲ್ಲಿ ಸಾವೊ ಕೇಟಾನೊ, ಪಿನ್‌ಹೀರೋಸ್, ಫಿನಾಸಾ/ಒಸಾಸ್ಕೋ ಮತ್ತು ಪ್ರಯಾ ಕ್ಲಬ್ ಪರವಾಗಿ ಅವರು ಆಡಿದ್ದರು.

'ಚೆನ್ನೈ ಗೆಲುವಿಗೆ ಸಹಾಯ ಮಾಡಿದ್ದು ಬಿಜೆಪಿ ಕಾರ್ಯಕರ್ತ' ಡಿಎಂಕೆಗೆ ತಿವಿದ ಅಣ್ಣಾಮಲೈ!

ಬ್ರೆಜಿಲ್ ರಾಷ್ಟ್ರೀಯ ತಂಡದ ಪರವಾಗಿ ಬೊರ್ಗೊ ಚೀನಾದ ನಾಂನ್‌ಜಿಂಗ್‌ನಲ್ಲಿ ನಡೆದ 2019 ಎಫ್‌ವಿಐಬಿ ವಾಲಿಬಾಲ್‌ ವುಮೆನ್ಸ್ ನೇಷನ್ಸ್‌ ಲೀಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ಕಾಜಮಾರ್ಕಾದಲ್ಲಿ ನಡೆದ ಟೋಕಿಯೊ 2020 ಒಲಿಂಪಿಕ್ ದಕ್ಷಿಣ ಅಮೆರಿಕಾದ ಅರ್ಹತಾ ಟೂರ್ನಿಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದರು.  ಅದರೊಂದಿಗೆ ಟರ್ಕಿಯಲ್ಲಿ (2015) ನಡೆದ U-23 FIVB ವಾಲಿಬಾಲ್ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು.

ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!

Follow Us:
Download App:
  • android
  • ios