ಏಕದಿನ ಕ್ರಿಕೆಟ್’ನಲ್ಲಿ ಮೊದಲ ವಿಕೆಟ್’ಗೆ ಬರೋಬ್ಬರಿ 304 ರನ್’ಗಳ ಜತೆಯಾಟವಾಡುವ ಮೂಲಕ ಪಾಕ್ ಆರಂಭಿಕರು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. 

ಬುಲವಾಯೊ[ಜು.20]: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್’ಮನ್ ಫಖರ್ ಜಮಾನ್ ಅಜೇಯ ದ್ವಿಶತಕ 210 ಹಾಗೂ ಇಮಾಮ್ ಉಲ್ ಹಕ್ 113 ಆಕರ್ಷಕ ಶತಕದ ನೆರವಿನಿಂದ ಜಿಂಬಾಬ್ವೆ ವಿರುದ್ಧ 399 ರನ್’ಗಳನ್ನು ಕಲೆ ಹಾಕುವ ಮೂಲಕ ಹಲವು ದಾಖಲೆಗಳನ್ನು ಬರೆದಿದೆ.

Add Asianetnews Kannada as a Preferred SourcegooglePreferred

ಏಕದಿನ ಕ್ರಿಕೆಟ್’ನಲ್ಲಿ ಮೊದಲ ವಿಕೆಟ್’ಗೆ ಬರೋಬ್ಬರಿ 304 ರನ್’ಗಳ ಜತೆಯಾಟವಾಡುವ ಮೂಲಕ ಪಾಕ್ ಆರಂಭಿಕರು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಮೊದಲ ವಿಕೆಟ್’ಗೆ 286 ರನ್ ಕಲೆ ಹಾಕಿದ್ದ ಶ್ರೀಲಂಕಾದ ಉಫುಲ್ ತರಂಗಾ-ಸನತ್ ಜಯಸೂರ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.

Scroll to load tweet…

399 ರನ್ ಪಾಕಿಸ್ತಾನ ಬಾರಿಸಿದ ಗರಿಷ್ಟ ಏಕದಿನ ಸ್ಕೋರ್ ಎನಿಸಿಕೊಂಡಿದೆ.

6ನೇ ಆಟಗಾರ: ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಕ್ರಿಸ್ ಗೇಲ್ ಹಾಗೂ ಮಾರ್ಟಿನ್ ಗಪ್ಟಿಲ್ ಬಳಿಕ ಇನ್ನೂರು ರನ್ ಬಾರಿಸಿದ ಆರನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಜಮಾನ್ ಪಾತ್ರರಾಗಿದ್ದಾರೆ.

ಅನ್ವರ್ ದಾಖಲೆ ಉಡೀಸ್: 21 ವರ್ಷಗಳ ಕಾಲ ಸಯೀದ್ ಅನ್ವರ್ ಹೆಸರಿನಲ್ಲಿದ್ದ 194 ರನ್[ಗರಿಷ್ಟ ವಯುಕ್ತಿಕ ಸ್ಕೋರ್] ದಾಖಲೆಯನ್ನು ಜಮಾನ್ ಅಳಿಸಿ ಹಾಕಿದ್ದಾರೆ.

Scroll to load tweet…

ವಿಚಿತ್ರವೆಂದರೆ ಜಮಾನ್ ಹಾಗೂ ಕ್ರಿಸ್ ಗೇಲ್ ಇಬ್ಬರು ಎಡಗೈ ಬ್ಯಾಟ್ಸ್’ಮನ್’ಗಳು ಜಿಂಬಾಬ್ವೆ ತಂಡದ ವಿರುದ್ಧವೇ ದ್ವಿಶತಕ ಸಿಡಿಸಿದ್ದಾರೆ.

ಪಾಕಿಸ್ತಾನ-ಜಿಂಬಾಬ್ವೆ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಜಿಂಬಾಬ್ವೆ 155 ರನ್’ಗಳಿಗೆ ಸರ್ವಪತನ ಕಾಣುವ ಮೂಲಕ 244 ರನ್’ಗಳ ಹೀನಾಯ ಸೋಲು ಕಂಡಿದೆ.

ಸಂಕ್ಷಿಪ್ತ ಸ್ಕೋರ್:

ಪಾಕಿಸ್ತಾನ: 399/1
ಫಖರ್ ಜಮಾನ್: 201*
ಮಸಕದ್ಜಾ: 78/1

ಜಿಂಬಾಬ್ವೆ: 155/10
ಟ್ರೈಪನೋ: 44
ಶದಾಬ್ ಖಾನ್: 28/4