6 ವರ್ಷಗಳ ಕಾಲ ದ.ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಎಬಿ ಡಿವಿಲಿಯರ್ಸ್ ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ಮೊದಲ ಫಾಫ್ ಡ್ಯುಪ್ಲೆಸಿಸ್ ಟಿ20 ಹಾಗೂ ಟೆಸ್ಟ್ ತಂಡದ ನಾಯಕರಾಗಿದ್ದರು.

ಜೋಹಾನ್ಸ್'ಬರ್ಗ್(ಸೆ.12): ಫಾಫ್ ಡ್ಯುಪ್ಲೆಸಿಸ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲೂ ಮುನ್ನಡೆಸಲಿದಾರೆ. ಈ ವಿಷಯವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲ ವಾರಗಳ ಹಿಂದೆ ಡಿವಿಲಿಯರ್ಸ್ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ರಾಷ್ಟ್ರೀಯ ಆಯ್ಕೆ ಸಮಿತಿ ಮಾಡಿದ ಶಿಫಾರಸಿಗೆ ಆಫ್ರಿಕಾ ಕ್ರಿಕೆಟ್ ಮಂಡಳಿ ಸಮ್ಮತಿ ಸೂಚಿಸಿತು.

‘ಡುಪ್ಲೆಸಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಒಬ್ಬ ನಾಯಕನಾಗಿ ಅವರೆಷ್ಟರ ಮಟ್ಟಿಗೆ ಸಮರ್ಥರು ಎನ್ನುವುದಕ್ಕೆ, ಪಾಕಿಸ್ತಾನ ವಿರುದ್ಧ ವಿಶ್ವ ಇಲೆವೆನ್ ತಂಡಕ್ಕೆ ಅವರನ್ನೇ ನಾಯಕರನ್ನಾಗಿ ನೇಮಿಸಿರುವುದೇ ಸಾಕ್ಷಿ’ ಎಂದು ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಹರೂನ್ ಲಾರ್ಗೋಟ್ ಹೇಳಿದ್ದಾರೆ.

6 ವರ್ಷಗಳ ಕಾಲ ದ. ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಎಬಿ ಡಿವಿಲಿಯರ್ಸ್ ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ಮೊದಲ ಫಾಫ್ ಡ್ಯುಪ್ಲೆಸಿಸ್ ಟಿ20 ಹಾಗೂ ಟೆಸ್ಟ್ ತಂಡದ ನಾಯಕರಾಗಿದ್ದರು.