Asianet Suvarna News Asianet Suvarna News

ಅರೇ..! ಇದೇನಿದು ಕ್ರಿಕೆಟ್‌ನಲ್ಲಿ ಹೆಲ್ಮೆಟ್‌ ಬ್ಯಾನ್ ಆಗ್ಬೇಕಂತೆ

ಜೀವ ರಕ್ಷಣೆಗೆ ಅಂತಾನೇ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್‌ ಧರಿಸಿ ಬ್ಯಾಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ  ಬೌಲರ್‌ಗಳಿಗೂ ಸಹ ಸುರಕ್ಷಾ ಕವಚವನ್ನು ಧರಿಸಲು ನಿಯಮ ಜಾರಿ ತರುವ ಚಿಂತನೆಗಳು ನಡೆದಿವೆ. ಹೀಗಿರುವಾಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್‌ ಒಬ್ಬ ಕ್ರಿಕೆಟ್‌ನಲ್ಲಿ ಹೆಲ್ಮೆಟ್ ನಿಷೇಧಿಸಬೇಕೆಂದು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Ex Australian cricketer Kim Hughes calls for ban helmets
Author
Bengaluru, First Published Sep 21, 2018, 8:56 AM IST

ಸಿಡ್ನಿ, [ಸೆ.21]:  ಜೀವ ರಕ್ಷಣೆಗೆ ಅಂತಾನೇ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್‌ ಧರಿಸಿ ಬ್ಯಾಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ  ಬೌಲರ್‌ಗಳಿಗೂ ಸಹ ಸುರಕ್ಷಾ ಕವಚವನ್ನು ಧರಿಸಲು ನಿಯಮ ಜಾರಿ ತರುವ ಚಿಂತನೆಗಳು ನಡೆದಿವೆ. ಹೀಗಿರುವಾಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್‌ ಒಬ್ಬ ಕ್ರಿಕೆಟ್‌ನಲ್ಲಿ ಹೆಲ್ಮೆಟ್ ನಿಷೇಧಿಸಬೇಕೆಂದು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 ಕಿರಿಯರ ಕ್ರಿಕೆಟ್‌ನಲ್ಲಿ ಹೆಲ್ಮೆಟ್‌ ಅನ್ನು ನಿಷೇಧಿಸಬೇಕು. ಒಂದು ವೇಳೆ ನಾನು ಕೋಚ್‌ ಆಗಿದ್ದರೆ, ಆಟಗಾರರಿಗೆ ಹೆಲ್ಮೆಟ್‌ ಇಲ್ಲದೆ ಆಡುವುದನ್ನು ಕಲಿಸುತ್ತಿದ್ದೆ ಎಂದು ಆಸ್ಪ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಿಮ್‌ ಹ್ಯೂಸ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ದೇಶಿಯ ಜೆಎಲ್‌ಟಿ ಏಕದಿನ ಕಪ್‌ ಟೂರ್ನಿಯ ನ್ಯೂ ಸೌತ್‌ ವೇಲ್ಸ್‌ ಮತ್ತು ಸೌತ್‌ ಆಸ್ಪ್ರೇಲಿಯಾ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ವೇಳೆ ಈ ಹೇಳಿಕೆ ನೀಡಿದ್ದಾರೆ. ‘ಹೆಲ್ಮೆಟ್‌ ಧರಿಸಿಲ್ಲದಿದ್ದರೆ ಆಟಗಾರ ಎಚ್ಚರಿಕೆಯಿಂದ ಆಡುತ್ತಾರೆ. ಆದರೆ ಹೆಲ್ಮೆಟ್‌ ನಿಷೇಧ ಮಾಡುವುದಿಲ್ಲ ಎಂಬುದು ನನಗೆ ತಿಳಿದಿದೆ ಎಂದು ಹ್ಯೂಸ್‌ ಹೇಳಿದ್ದಾರೆ. 

ನಾಲ್ಕು ವರ್ಷಗಳ ಹಿಂದಷ್ಟೇ ಆಸ್ಪ್ರೇಲಿಯಾದ ಫಿಲ್‌ ಹ್ಯೂಸ್‌, ದೇಶಿ ಪಂದ್ಯವೊಂದರಲ್ಲಿ ತಲೆಗೆ ಚೆಂಡು ಬಡಿದು ಮೃತಪಟ್ಟಿದ್ದರು. ಆದರೂ ಸಹ ಕಿಮ್‌ ಹ್ಯೂಸ್‌, ಹೆಲ್ಮೆಟ್ ನಿಷೇಧಿಸಬೇಕು ಎಂದು ಹೇಳಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

Follow Us:
Download App:
  • android
  • ios