Asianet Suvarna News Asianet Suvarna News

ಬ್ಯಾಡ್ಮಿಂಟನ್ ಅಂಕ ಗಳಿಕೆ ಪದ್ದತಿಯಲ್ಲಿ ಬದಲಾವಣೆ..?

ಪ್ರಸ್ತುತ ಇರುವ 21 ಅಂಕಗಳ 3 ಗೇಮ್ ಬದಲಾಗಿ, 11 ಅಂಕಗಳ 5 ಗೇಮ್ ನಡೆಸಲು ಬ್ಯಾಡ್ಮಿಂಟನ್ ಸಂಸ್ಥೆ ಪ್ರಸ್ತಾಪಿಸಿದೆ. ಸದ್ಯ ಗೇಮ್ ಗೆಲ್ಲಲು 2 ಅಂಕಗಳ ವ್ಯತ್ಯಾಸ ಹೊಂದಿರಬೇಕು. ಆದರೆ ಹೊಸ ಮಾದರಿಯ ಪ್ರಕಾರ 11 ಅಂಕಗಳನ್ನು ಮೊದಲು ತಲುಪುವವರು ಗೇಮ್ ಗೆಲ್ಲಲಿದ್ದಾರೆ.

Evolution of badminton scoring system over the years

ನವದೆಹಲಿ(ಫೆ.15): ಬ್ಯಾಡ್ಮಿಂಟನ್ ಆಟವನ್ನು ಮತ್ತಷ್ಟು ರೋಚಕಗೊಳಿಸುವ ಉದ್ದೇಶದಿಂದ, ಅಂಕ ಪದ್ಧತಿಯಲ್ಲಿ ಬದಲಾವಣೆ ತರಲು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಚಿಂತನೆ ನಡೆಸಿದೆ.

ಪ್ರಸ್ತುತ ಇರುವ 21 ಅಂಕಗಳ 3 ಗೇಮ್ ಬದಲಾಗಿ, 11 ಅಂಕಗಳ 5 ಗೇಮ್ ನಡೆಸಲು ಬ್ಯಾಡ್ಮಿಂಟನ್ ಸಂಸ್ಥೆ ಪ್ರಸ್ತಾಪಿಸಿದೆ. ಸದ್ಯ ಗೇಮ್ ಗೆಲ್ಲಲು 2 ಅಂಕಗಳ ವ್ಯತ್ಯಾಸ ಹೊಂದಿರಬೇಕು. ಆದರೆ ಹೊಸ ಮಾದರಿಯ ಪ್ರಕಾರ 11 ಅಂಕಗಳನ್ನು ಮೊದಲು ತಲುಪುವವರು ಗೇಮ್ ಗೆಲ್ಲಲಿದ್ದಾರೆ.

ಮೇ.19ರಂದು ಬ್ಯಾಂಕಾಕ್‌'ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾಪದ ಬಗ್ಗೆ ಚರ್ಚಿಸಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. 11 ಅಂಕಗಳ 5 ಗೇಮ್ ಪದ್ಧತಿಯನ್ನು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ 2014ರಿಂದಲೇ ಪ್ರಾಯೋಗಿಕವಾಗಿ ನಡೆಸುತ್ತಿದೆ. ಪಂದ್ಯಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿಗೆ ಸಮಯ ನಡೆಯುತ್ತಿದ್ದುಪ್ರಸಾರಕ್ಕೆ ಸಮಸ್ಯೆಯಾಗುತ್ತಿದೆ ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಮುಂದಾಗುತ್ತಿರುವುದಾಗಿ ಬ್ಯಾಡ್ಮಿಂಟನ್ ಸಂಸ್ಥೆ ಹೇಳಿದೆ.

Follow Us:
Download App:
  • android
  • ios