ಚೆಂಡು ಹೊಳಪು ಕಂಡುಕೊಳ್ಳಲು ಕೊಹ್ಲಿ ತಮ್ಮ ಬಾಯಿನಲ್ಲಿನ ಉಗುಳನ್ನು ಚೆಂಡಿಗೆ ಬಳಿದು ತಿಕ್ಕಿದ್ದಾರೆ. ಇದರಿಂದ ಚೆಂಡಿನ ಒಂದು ಭಾಗ ಹೊಳಪು ಕಂಡಿದೆ ಎಂದು ಟ್ಯಾಬ್ಲೆಡ್ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.
ನವದೆಹಲಿ(ನ.22): ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರಾಜ್‌ಕೋಟ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಬ್ರಿಟಿಷ್ ಟ್ಯಾಬ್ಲೆಡ್ ಪತ್ರಿಕೆಯೊಂದು ಆರೋಪ ಮಾಡಿದೆ.
ಚೆಂಡು ಹೊಳಪು ಕಂಡುಕೊಳ್ಳಲು ಕೊಹ್ಲಿ ತಮ್ಮ ಬಾಯಿನಲ್ಲಿನ ಉಗುಳನ್ನು ಚೆಂಡಿಗೆ ಬಳಿದು ತಿಕ್ಕಿದ್ದಾರೆ. ಇದರಿಂದ ಚೆಂಡಿನ ಒಂದು ಭಾಗ ಹೊಳಪು ಕಂಡಿದೆ ಎಂದು ಟ್ಯಾಬ್ಲೆಡ್ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡು ಪ್ಲೆಸಿಸ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಸಿಲುಕಿದ್ದರು.