Asianet Suvarna News Asianet Suvarna News

ರೂಟ್ ಭರ್ಜರಿ ಶತಕ- ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು

ಏಕದಿನ ಸರಣಿ ಗೆಲುವಿನಲ್ಲಿ ದಾಖಲೆ ಬರೆದಿದ್ದ ಟೀಂ ಇಂಡಿಯಾಗೆ ಇಂಗ್ಲೆಂಡ್ ಆಘಾತ ನೀಡಿದೆ. 2019ರ ವಿಶ್ವಕಪ್ ಪೂರ್ವಭಾವಿ ತಯಾರಿ ಎಂದೇ ಬಂಬಿತವಾಗಿದ್ದ ಸರಣಿಯಲ್ಲಿ ವಿರಾಟ್ ಕೊಹ್ಲಿ ಸೈನ್ಯ ಸೋಲು ಅನುಭವಿಸಿದೆ. ಸರಣಿ ಸೋಲಿಗೆ ಕಾರಣವಾಗಿದ್ದು ಅಂತಿಮ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎಡವಿದ್ದೆಲ್ಲಿ? ಇಲ್ಲಿದೆ ವಿವರ.

England win the series 2-1 and maintain their streak

ಲೀಡ್ಸ್(ಜು.17): ಟೀಂ ಇಂಡಿಯಾದ ಸತತ  ಏಕದಿನ ಸರಣಿ ಗೆಲುವಿನ ಓಟಕ್ಕೆ ಇಂಗ್ಲೆಂಡ್ ಬ್ರೇಕ್ ಹಾಕಿದೆ. ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸೋ ಮೂಲಕ ಏಕದಿನ ಸರಣಿಯನ್ನ 1-2 ಅಂತರದಲ್ಲಿ ಕೈಚೆಲ್ಲಿದೆ. 

ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 257 ರನ್ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ 44.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು.

 

 

ಜಾನಿ ಬೈರಿಸ್ಟೋ ಹಾಗೂ ಜೇಮ್ಸ್ ವಿನ್ಸ್ ಉತ್ತಮ ಆರಂಭ ನೀಡಿದರು. ಬೈರಿಸ್ಟೋ 30 ಹಾಗೂ ವಿನ್ಸ್ 27 ರನ್ ಕಾಣಿಕೆ ನೀಡಿದರು. ಆರಂಭಿಕರ ವಿಕೆಟ್ ಕಬಳಿಸಿ ಯಶಸ್ಸು ಸಾಧಿಸಿದ ಟೀಂ ಇಂಡಿಯಾ ಮತ್ತೆ ಮಕಾಡೆ ಮಲಗಿತು. ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ ಜೊತೆಯಾಟಕ್ಕೆ ಟೀಂ ಇಂಡಿಯಾ ಸುಸ್ತಾಯಿತು.

ರೂಟ್ ಹಾಗೂ ಮಾರ್ಗನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಜೋಡಿಯನ್ನ ಬೇರ್ಪಡಿಸಲು ಭಾರತದ ಪ್ರಯತ್ನಗಳು ವಿಫಲವಾಯಿತು. ರೂಟ್ ಭರ್ಜರಿ ಶತಕ ಸಿಡಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ರೂಟ್ 13ನೇ ಶತಕ ದಾಖಲಿಸಿದರು.

 

 

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಯಾನ್ ಮಾರ್ಗನ್ ಅಜೇಯ 88 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 44.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಅಂತಿಮ ಪಂದ್ಯ ಗೆಲ್ಲೋ ಮೂಲಕ ಇಂಗ್ಲೆಂಡ್ 2-1 ಅಂತರದಲ್ಲಿ ಸರಣಿ ಕೈವಶ ಮಾಡಿತು. ಇಷ್ಟೇ ಅಲ್ಲ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿ ಸೋಲು ಅನುಭವಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗಧಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಸಿಡಿಸಿತ್ತು. ನಾಯಕ ವಿರಾಟ್ ಕೊಹ್ಲಿ 71 ರನ್ ಸಿಡಿಸಿದರೆ, ಶಿಖರ್ ಧವನ್ 44 ಹಾಗೂ ಎಂ ಎಸ್ ಧೋನಿ 42 ರನ್ ಕಾಣಿಕೆ ನೀಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

Follow Us:
Download App:
  • android
  • ios