Asianet Suvarna News Asianet Suvarna News

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತರು ಭಾರತವೇ ನಂ.1

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ತಯಾರಿ ಆರಂಭಗೊಂಡಿದೆ. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ, 5ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಒಂದು ವೇಳೆ ಫಲಿತಾಂಶ ಇಂಗ್ಲೆಂಡ್ ಪರವಾದರೆ ರ‍್ಯಾಂಕಿಂಗ್‌ನಲ್ಲಿ ಬದಲಾವಣೆಯಾಗುತ್ತಾ? ಇಲ್ಲಿದೆ ಸಂಪೂರ್ಣ ವಿವರ.

England vs India 2018: Will India hold the No.1 spot in ICC Rankings after the Test series?
Author
Bengaluru, First Published Jul 29, 2018, 10:57 AM IST

ಬೆಂಗಳೂರು(ಜು.29): ಭಾರತ-ಇಂಗ್ಲೆಂಡ್ ನಡುವಿನ ಬಹು ನಿರೀಕ್ಷಿತ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೇವಲ 3 ದಿನ ಬಾಕಿ ಇದೆ. ಆ.1ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಟಿ20 ಸರಣಿ ಗೆದ್ದು ಬೀಗಿದ್ದ ಭಾರತ ತಂಡ, ಏಕದಿನ ಸರಣಿಯನ್ನು 1-2 ರ ಅಂತರದಲ್ಲಿಸೋತು ನಿರಾಸೆ ಅನುಭವಿಸಿತ್ತು. 

ಪ್ರವಾಸದಲ್ಲಿ ಮಿಶ್ರಫಲ ಕಂಡಿರುವ ಭಾರತ, ಟೆಸ್ಟ್ ಸರಣಿಯಲ್ಲಿ ಎಂತಹ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಭಾರತ ತಂಡಕ್ಕೆ ಸರಣಿ ಆರಂಭಕ್ಕೂ ಮೊದಲೇ ಹಲವು ಸಮಸ್ಯೆಗಳು ಎದುರಾಗಿವೆ. ಒಂದೆಡೆ ಪ್ರಮುಖ ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ ಗಾಯಗೊಂಡಿದ್ದಾರೆ. 

ಭುವನೇಶ್ವರ್ ಕನಿಷ್ಠ 3 ಟೆಸ್ಟ್‌ಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಬೂಮ್ರಾ ಎಸೆಕ್ಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡಿದ್ದರೂ, ಅವರು ಎಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಬಿಸಿಸಿಐ ಆಗಲಿ, ಭಾರತ ತಂಡದ ಆಡಳಿತವಾಗಲಿ ಅಧಿಕೃತ ಮಾಹಿತಿ ಒದಗಿಸಿಲ್ಲ. 

ಮತ್ತೊಂದೆಡೆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಲಯ ಕಳೆದುಕೊಂಡು ಪರದಾಡುತ್ತಿದ್ದಾರೆ. ಅದರಲ್ಲೂ ಧವನ್, ಅಭ್ಯಾಸ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ತಿಂಗಳುಗಳ ಹಿಂದೆಯೇ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಇಂಗ್ಲೆಂಡ್‌ಗೆ ತೆರಳಿದ್ದರೂ, ಪೂಜಾರ ಮಾತ್ರ ಬ್ಯಾಟಿಂಗ್ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. 

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಭಾರತ ತಂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. ಈ ಪ್ರಶ್ನೆಗೆ ಐಸಿಸಿ ವೆಬ್‌ಸೈಟ್‌ನಲ್ಲಿರುವ ‘ರ‍್ಯಾಂಕಿಂಗ್ ಪ್ರಿಡಿಕ್ಟರ್’ ಸಹಾಯ ಪಡೆದಾಗ ಸಿಕ್ಕ ಉತ್ತರ, 0-5 ಪಂದ್ಯಗಳಿಂದ ಭಾರತ ಸೋಲುಂಡರೂ ನಂ.1 ಸ್ಥಾನದಿಂದ ಮಾತ್ರ ವಿರಾಟ್ ಪಡೆ ಕೆಳಗಿಳಿಯುವುದಿಲ್ಲ. ಭಾರತ ಸದ್ಯ 120 ರೇಟಿಂಗ್ ಅಂಕದೊಂದಿಗೆ ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇದೇ ವೇಳೆ ಇಂಗ್ಲೆಂಡ್ ತಂಡ 100 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಭಾರತ ಇಲ್ಲವೇ ಇಂಗ್ಲೆಂಡ್ ಸರಣಿ ಯನ್ನು ಎಷ್ಟು ಪಂದ್ಯಗಳ ಅಂತರದಲ್ಲಿ ಗೆದ್ದರೆ ರೇಟಿಂಗ್ ಅಂಕದಲ್ಲಿ ಆಗುವ ಬದಲಾವಣೆ ಏನು?. ಒಂದೊಮ್ಮೆ ಸರಣಿ ಡ್ರಾ ಆದರೆ ಏನಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ವಿವರಣೆ ನೀಡಲಾಗಿದೆ.

ಡ್ರಾಗೊಂಡರೆ ರೇಟಿಂಗ್‌ನಲ್ಲಿಲ್ಲ ಬದಲಾವಣೆ: ಒಂದೊಮ್ಮೆ ಸರಣಿ 0-0,1-1. ಇಲ್ಲವೇ 2-2 ಪಂದ್ಯಗಳಲ್ಲಿ ಡ್ರಾಗೊಂಡರೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ಸ್ಥಾನ ಹಾಗೂ ರೇಟಿಂಗ್ ಅಂಕಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಭಾರತ 120 ರೇಟಿಂಗ್ ಅಂಕವನ್ನು ಕಾಯ್ದುಕೊಂಡರೆ, ಇಂಗ್ಲೆಂಡ್ ರೇಟಿಂಗ್ 100ರಲ್ಲೇ ಉಳಿಯಲಿದೆ. ತವರಲ್ಲಿ ಇಂಗ್ಲೆಂಡ್ ಬಲಿಷ್ಠವೆನಿಸಿದರೂ, ಉತ್ತಮ ಆಟಗಾರರನ್ನು ಹೊಂದಿರುವ ಭಾರತಕ್ಕೆ ಗೆಲ್ಲುವ ಸಾಮರ್ಥ್ಯವಿದೆ. 

Follow Us:
Download App:
  • android
  • ios