ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಇಂಗ್ಲೆಂಡ್‌ನ ಮತ್ತೊಬ್ಬ ಸ್ಟಾರ್ ಪ್ಲೇಯರ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

ಲಂಡನ್, (ಸೆ.13): ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಇಂಗ್ಲೆಂಡ್‌ನ ಮತ್ತೊಬ್ಬ ಸ್ಟಾರ್ ಪ್ಲೇಯರ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಪೌಲ್ ಕಾಲಿಂಗ್‌ವುಡ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು, ಇದೀಗ ಸುಮಾರು 23 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ( ಪ್ರಥಮ ದರ್ಜೆ) ನಿವೃತ್ತಿ ಘೋಷಿಸಿದ್ದಾರೆ. 

 42 ವರ್ಷದ ಕಾಲಿಂಗ್‌ವುಡ್, ಈವರೆಗೆ 68 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನಾಡಿ ಬರೋಬ್ಬರಿ 4259 ರನ್ ಕಲೆಹಾಕಿದ್ದು, 10 ಶತಕ ಹಾಗೂ 1 ದ್ವಿಶತಕ ಸಿಡಿಸಿದ್ದಾರೆ. ಇನ್ನು 197 ಏಕದಿನ ಪಂದ್ಯಗಳಲ್ಲಿ 5 ಶತಕಗಳೊಂದಿಗೆ 5092 ರನ್ ಸಂಪಾದಿಸಿದರೆ, 36 ಟಿ20 ಪಂದ್ಯಗಳನ್ನಾಡಿ 583 ರನ್ ಪೇರಿಸಿದ್ದಾರೆ.

2003ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಮಾಡಿದ್ದ ಕಾಲಿಂಗ್‌ವುಡ್, ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿದ್ದಾರೆ. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದ ಕಾಲಿಂಗ್ ವುಡ್, ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ತಮ್ಮ ಕ್ರಿಕೆಟ್ ಜರ್ನಿ ಮುಂದುವರೆಸಿದ್ದರು. ಆದರೆ, ಇಂದು (ಗುರುವಾರ) ಪ್ರಥಮ ದರ್ಜೆ ಕ್ರಿಕೆಟ್ ಗೂ ತೆರೆ ಎಳೆದಿದ್ದಾರೆ. ಡರ್ ಹ್ಯಾಮ್ ಕೌಂಟಿ ತಂಡದ ನಾಯಕರಾಗಿರುವ ಕಾಲಿಂಗ್ 304 ಪ್ರಥಮ ದರ್ಜೆ ಪಂದ್ಯಗಳಿಂದ 16,891 ರನ್ ಹಾಗೂ 164 ವಿಕೆಟ್ ಕಬಳಿಸಿದ್ದಾರೆ.