ಫಿಫಾ 2018: ಕೊಲಂಬಿಯಾ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಫಿಫಾ ವಿಶ್ವಕಪ್ ಟೂರ್ನಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರೋ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

England knock Colombia out of World Cup in last-16 penalty shootout

ರಷ್ಯಾ(ಜು.03): ಫಿಫಾ ವಿಶ್ವಕಪ್ ಟೂರ್ನಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನ 4-3 ಅಂತರದಿಂದ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮೊದಲಾರ್ಧದಲ್ಲಿ ಗೋಲ್‌ಗಾಗಿ ಉಭಯ ತಂಡಗಳ ಹೋರಾಟ ತೀವ್ರ ಹೋರಾಟ ನಡೆಸಿತು. ಆದರೆ ಕೊಲಂಬಿಯಾ ಹಾಗೂ ಇಂಗ್ಲೆಂಡ್ ತಂಡ ಡಿಫೆಂಡರ್‌ಗಳು ಗೋಲಿಗೆ ಅವಕಾಶ ನೀಡಲಿಲ್ಲ. ಜಿದ್ದಾಜಿದ್ದಿನ ಹೋರಾಟದಲ್ಲಿ ವಾಗ್ವಾದಗಳು ನಡೆಯಿತು. ಹೀಗಾಗಿ 2 ಹಳದಿ ಕಾರ್ಡ್‌ಗಳು ರಾರಾಜಿಸಿತು.  ಆದರೆ ಫಸ್ಟ್ ಹಾಫ್‌ನಲ್ಲಿ ಗೋಲು ಮಾತ್ರ ದಾಖಲಾಗಲಿಲ್ಲ.

ದ್ವಿತಿಯಾರ್ಧದ ಹೋರಾಟ ಮತ್ತಷ್ಟು ರೋಚಕಗೊಂಡಿತು. ಆಕ್ರಣಕಾರಿ ಆಟಕ್ಕೆ ಮುಂದಾದ ಇಂಗ್ಲೆಂಡ್ 57ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನ ಉಪಯೋಗಿಸಿಕೊಂಡಿತು. ಹ್ಯಾರಿ ಕೇನ್ ಗೋಲು ಬಾರಿಸೋ ಮೂಲಕ ಇಂಗ್ಲೆಂಡ್ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಇನ್ನೇನು ಇಂಗ್ಲೆಂಡ್‌ಗೆ ಸುಲಭ ಗೆಲುವು ಅನ್ನುವಷ್ಟರಲ್ಲೇ 90+3 ನೇ ನಿಮಿಷದಲ್ಲಿ ಕೊಲಂಬಿಯಾದ ಯೆರಿ ಮಿನಾ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಭಲಗೊಳಿಸಿದರು. ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ  ಫಲಿತಾಂಶ ನಿರ್ಧರಿಸಲಾಯಿತು. ಶೂಟೌಟ್‌ನಲ್ಲಿ ಇಂಗ್ಲೆಂಡ್ 4 ಗೋಲು ಸಿಡಿಸಿದರೆ, ಕೊಲಂಬಿಯಾ 3 ಗೋಲು ಸಿಡಿಸಿ ಸೋಲೊಪ್ಪಿಕೊಂಡಿತು.

 

 

Latest Videos
Follow Us:
Download App:
  • android
  • ios