ಓಲ್ಡ್ ಟ್ರಾಫೋರ್ಡ್(ಜು.04): ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಸೋಲು ಅನುಭವಿಸಿದೆ. ಈ ಮೂಲಕ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಆದರೆ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ಇಂಗ್ಲೆಂಡ್ ಕ್ರಿಕೆಟಿಗರು ಕುಣಿದು ಕುಪ್ಪಳಿಸಿದ್ದಾರೆ.

ಭಾರತ ವಿರುದ್ಧದ ಮೊದಲ ಟಿ20 ಪಂದ್ಯದ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ತತ್ತರಿಸಿದ  ಇಂಗ್ಲೆಂಡ್, ಕೆಎಲ್ ರಾಹುಲ್ ಬ್ಯಾಟಿಂಗ್ ಆರ್ಭಟಕ್ಕೆ ಹೈರಾಣಾಗಿದ್ದರು. ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂಗೆ ತೆರಳಿದ ಇಂಗ್ಲೆಂಡ್ ತಂಡ ನೇರವಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದೆ.

 

 

#InEricDierWeTrust #itscominghome @england

A post shared by Jos Buttler (@josbuttler) on Jul 3, 2018 at 2:01pm PDT

ಭಾರತ ವಿರುದ್ಧದ ಸೋಲಿನಿಂದ ಬೇಸರಗೊಂಡ ಇಂಗ್ಲೆಂಡ್ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಂ ಪ್ರವೇಶಿಸುತ್ತಿದ್ದಂತೆ, ಇಂಗ್ಲೆಂಡ್ ಹಾಗೂ ಕೊಲಂಬಿಯಾ ನಡುವಿನ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯ ಅಂತಿಮ ಘಟ್ಟ ತಲುಪಿತ್ತು. 

ಪಂದ್ಯ 1-1 ಡ್ರಾನಲ್ಲಿ ಸಮಭಲ ಸಾಧಿಸಿದ್ದರಿಂದ,  ಪೆನಾಲ್ಟಿ ಶೂಟೌಟ್ ಮೂಲಕ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ರೋಚಕ ಗೆಲುವನ್ನ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಿಸಿದರು. 4-3 ಅಂತರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುತ್ತಿದ್ದಂತೆ, ಜೋ ರೂಟ್, ಕ್ರಿಸ್ ಜೋರ್ಡಾನ್, ಮೊಯಿನ್ ಆಲಿ ಸೇರಿದಂತೆ ಇಂಗ್ಲೆಂಡ್ ತಂಡ ಕುಣಿದು ಕುಪ್ಪಳಿಸಿದ್ದಾರೆ.