ಭಾರತದಲ್ಲಿ ಕ್ರಿಕೆಟ್ ಆಟಗಾರರು ಎಂಥ ದೊಡ್ಡ ಸ್ಟಾರ್'ಗಳು ಎಂಬ ಸತ್ಯದರ್ಶನ ತಮಗಾಯಿತು ಎಂದು ಹೇಳಿ ವಾನ್ ಟ್ವೀಟ್ ಮಾಡಿದ್ದಾರೆ.
ರಾಂಚಿ(ಮಾ. 17): ವಿರಾಟ್ ಕೊಹ್ಲಿ ಸದ್ಯ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗನೆನಿಸಿದ್ದಾರೆ. ಕೆಲ ವರ್ಷಗಳವರೆಗೂ ಸಚಿನ್'ಗೆ ಸಿಗುತ್ತಿದ್ದ ಆರಾಧನೆ ಈಗ ಕೊಹ್ಲಿಗೆ ದೊರಕುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್'ನಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಕೊಹ್ಲಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಈ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ಕೊಹ್ಲಿ ತಮ್ಮ ಭುಜಕ್ಕೆ ಗಾಯ(Ligament Tear) ಮಾಡಿಕೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸ್ಕ್ಯಾನ್'ಗಳನ್ನು ಮಾಡಲಾಯಿತು. ಕೊಹ್ಲಿ ಆಸ್ಪತ್ರೆ ಸೇರುತ್ತಿದ್ದಂತೆಯೇ ಜನಸಾಗರವೇ ಆಸ್ಪತ್ರೆಗೆ ಹರಿದುಬಂದಿತು.
ಇಂಗ್ಲೆಂಡ್'ನ ಫುಟ್ಬಾಲ್ ಆಟಗಾರರಿಗಿಂತಲೂ ಕೊಹ್ಲಿ ದೊಡ್ಡ ಸ್ಟಾರ್:
ಕೊಹ್ಲಿ ಆಸ್ಪತ್ರೆಯಿಂದ ಹೊರಬರುತ್ತಿರುವ ಹಾಗೂ ಜನಸಾಗರ ನೆರೆದಿರುವ ದೃಶ್ಯದ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್'ಲೋಡ್ ಮಾಡಿದ್ದಾರೆ. ಇಂಥದ್ದೊಂದು ವಿಡಿಯೋ ನೋಡಿ ಇಂಗ್ಲೆಂಡ್'ನ ಕ್ರಿಕೆಟಿಗ ಮೈಕೇಲ್ ವಾನ್ ನಿಬ್ಬೆರಗಾಗಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಆಟಗಾರರು ಎಂಥ ದೊಡ್ಡ ಸ್ಟಾರ್'ಗಳು ಎಂಬ ಸತ್ಯದರ್ಶನ ತಮಗಾಯಿತು ಎಂದು ಹೇಳಿ ವಾನ್ ಟ್ವೀಟ್ ಮಾಡಿದ್ದಾರೆ. ತಮ್ಮ ದೇಶದ ಪ್ರೀಮಿಯರ್ ಲೀಗ್'ನ ಫುಟ್ಬಾಲ್ ಸ್ಟಾರ್'ಗಳಿಗಿಂತ ಭಾರತದಲ್ಲಿ ಕ್ರಿಕೆಟಿಗರು ದೊಡ್ಡ ಸ್ಟಾರ್'ಗಳಾಗಿದ್ದಾರೆ ಎಂದು ಮೈಕೇಲ್ ವಾನ್ ಉದ್ಗರಿಸಿದ್ದಾರೆ.
