ಸ್ಟೋಕ್ಸ್ ಬದಲಿಗೆ ವೇಗಿ ಸ್ಟೀವ್ ಫಿನ್‌'ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಲಂಡನ್(ಅ.07): ಆ್ಯಷಸ್ ಸರಣಿ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ. ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಅಲೆಕ್ಸ್ ಹೇಲ್ಸ್ ಅವರನ್ನು ಇಂಗ್ಲೆಂಡ್ ತಂಡದಿಂದ ಹೊರಗಿಡಲಾಗಿದೆ.

ಹೌದು, ಇತ್ತೀಚೆಗೆ ನೈಟ್‌'ಕ್ಲಬ್‌'ವೊಂದರ ಬಳಿ ಮಧ್ಯರಾತ್ರಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ವಿವಾದಕ್ಕೀಡಾಗಿದ್ದ, ಇಂಗ್ಲೆಂಡ್‌'ನ ಆಲ್ರೌಂಡರ್ ಬೆನ್ ಸ್ಟೋಕ್ಸ್‌'ರನ್ನು ಮುಂಬರುವ ಆ್ಯಷಸ್ ಟೂರ್ನಿಗೆ ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ. ಸ್ಟೋಕ್ಸ್ ಬದಲಿಗೆ ವೇಗಿ ಸ್ಟೀವ್ ಫಿನ್‌'ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಈ ಮೊದಲು ಪ್ರಕಟಿಸಿದ್ದ ತಂಡದಲ್ಲಿ ಸ್ಟೋಕ್ಸ್‌ಗೆ ಸ್ಥಾನ ನೀಡಲಾಗಿತ್ತು. ಆದರೆ, ಹಲ್ಲೆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ತನಕ ಸ್ಟೋಕ್ಸ್ ಹಾಗೂ ಘಟನೆ ವೇಳೆ ಅವರ ಜತೆಗಿದ್ದ ಅಲೆಕ್ಸ್ ಹೇಲ್ಸ್‌ರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ