ಲಂಡನ್‌(ಮೇ.25): ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಅಲೆಕ್ಸ್ ಹೇಲ್ಸ್ ಮನೋರಂಜನಾ ಡ್ರಗ್ಸ್ ಸೇವಿಸಿ ತಂಡದ ಹೊರಬಿದ್ದಿದ್ದರು. ಈ ಮೂಲಕ ಸ್ಟಾರ್ ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ವಿಶ್ವಕಪ್ ಟೂರ್ನಿಯಿಂದ ಸ್ಟಾರ್ ಕ್ರಿಕೆಟಿಗ ಔಟ್..!

ಹೌದು, ಐಸಿಸಿ ಏಕದಿನ ವಿಶ್ವಕಪ್‌ಗೆ ಕೇವಲ 5 ದಿನ ಬಾಕಿ ಇದ್ದು, ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮೊರ್ಗನ್‌ ಎಡಗೈನ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಶುಕ್ರವಾರ ಇಲ್ಲಿ ಕ್ಯಾಚಿಂಗ್‌ ಅಭ್ಯಾಸ ನಡೆಸುವ ವೇಳೆ ಅವರು ಗಾಯಗೊಂಡರು. 

ಅವರು ಬೆರಳಿನ ಎಕ್ಸ್‌-ರೇ ತೆಗೆಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ನಿರ್ಧರಿಸಿದ್ದು, ಶನಿವಾರ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆದ ಅಭ್ಯಾಸ ಪಂದ್ಯದ ವೇಳೆ ಲಂಕಾದ ಆವಿಷ್ಕಾ ಫೆರ್ನಾಂಡೋ ಗಾಯಗೊಂಡು ಮೈದಾನ ತೊರೆದರು.

ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಇಲ್ಲಿದೆ ನೋಡಿ..