2002ರ ಆಂಟಿಗುವಾ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ದವಡೆಗೆ ಬ್ಯಾಂಡೇಜ್ ಕಟ್ಟಿ ಬೌಲಿಂಗ್ ಮಾಡಿದ್ದರು. ಈ ಮೂಲಕ ತಂಡವನ್ನ ಸೋಲಿನಿಂದ ಪಾರು ಮಾಡಿದ್ದರು. ಇದೀಗ ಇದೇ ಘಟನೆಯನ್ನ ನೆನಪಿಸುವಂತೆ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟಿಗ ಬ್ಯಾಂಡೇಜ್ ಕಟ್ಟಿ ಬ್ಯಾಟಿಂಗ್ ಇಳಿದಿದ್ದಾರೆ. ಈ ಪಂದ್ಯದ ವಿವರ ಇಲ್ಲಿದೆ. 

ಮ್ಯಾಂಚೆಸ್ಟರ್(ಜು.25): ಇಂಗ್ಲೆಂಡ್ ಕೌಂಟಿ ತಂಡ ಲ್ಯಾಂಕಶೈರ್ ನಾಯಕ ಲಿಯಾಮ್ ಲಿವಿಂಗ್‌ಸ್ಟೋನ್ ಸಾಹಸ ಕ್ರಿಕೆಟ್ ಜಗತ್ತನ್ನು ಬೆರಗಾಗಿಸಿದೆ. ಎಡಗೈ ಶಸ್ತ್ರಚಿಕಿತ್ಸೆಗೆ ಒಳಗಾದ ಮರು ದಿನವೇ, ಕೈಗೆ ಶಿನ್ ಗಾರ್ಡ್ (ಮೊಣಕಾಲಿನ ರಕ್ಷಣಾ ಕವಚ) ಧರಿಸಿ ಬ್ಯಾಟ್ ಮಾಡಲು ಕ್ರೀಸ್‌ಗಿಳಿಯುವ ಮೂಲಕ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೆನಪಿಸಿದ್ದಾರೆ.

ಯಾರ್ಕ್‌ಶೈರ್ ವಿರುದ್ಧ ಕೌಂಟಿ ಪಂದ್ಯದಲ್ಲಿ ತಂಡ ಸೋಲಿನ ಅಂಚಿನಲ್ಲಿತ್ತು. ಕೊನೆ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗಳಿದ ಲಿಯಾಮ್ ನಾನ್‌ಸ್ಟ್ರೈಕ್ ಬದಿಯಲ್ಲಿದ್ದರು. ಆ್ಯಂಡರ್‌ಸನ್ ಔಟಾಗಿದ್ದರಿಂದ ಲಿವಿಂಗ್‌ಸ್ಟೋನ್ ಬೌಲಿಂಗ್ ದಾಳಿ ಎದುರಿಸುವ ಪರಿಸ್ಥಿತಿ ಎದುರಾಗಲಿಲ್ಲ. 

Scroll to load tweet…

ಕೈಗೆ ಬ್ಯಾಂಡೇಜ್ ಸುತ್ತಿ ಬ್ಯಾಟಿಂಗ್ ಇಳಿದ ಲಿಯಾಮ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನ ನೆನಪಿಸಿದ್ದಾರೆ. 2002ರಲ್ಲಿ ಆಂಟಿಗುವಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ, ವೆಸ್ಟ್ಇಂಡೀಸ್ ವೇಗಿ ಮೆರ್ವಿನ್ ಡಿಲೋನ್ ಬೌನ್ಸರ್ ಎಸೆತ ಕುಂಬ್ಳೆ ದವಡೆಗೆ ಬಡಿದಿತ್ತು. ಇದರೊಂದಿಗೆ ಕುಂಬ್ಳೆ ದವಡೆ ಮುರಿದಿತ್ತು.

6 ರನ್ ಗಳಿಸಿ ಔಟಾದ ಕುಂಬ್ಳೆ ನೇರವಾಗಿ ಆಸ್ಫತ್ರೆ ಸೇರಿಕೊಂಡರು. ದವಡೆ ಮೂಳೆ ಮರಿದಿದೆ. ಹೀಗಾಗಿ ಹೆಚ್ಚಿನ ವಿಶ್ರಾಂತಿ ಅಗತ್ಯ ಎಂದು ವೈದ್ಯರು ತಿಳಿಸಿದ್ದರು. ಆದರೆ ಯಾರ ಮಾತನ್ನೂ ಕೇಳದ ಕುಂಬ್ಳೆ ಬ್ಯಾಂಡೇಜ್ ಸುತ್ತಿ ಮೈದಾನಕ್ಕಿಳಿದು ಬ್ರಿಯಾನ್ ಲಾರಾ ವಿಕೆಟ್ ಕಬಳಿಸಿದರು. ಈ ಮೂಲಕ ಸೋಲಿನತ್ತ ಸಾಗಿದ್ದ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.