ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡ 196 ರನ್'ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ವಿರಾಮದ ಬಳಿಕ ಮತ್ತೆ ಆಂಗ್ಲರ ಮೇಲೆ ಹಿಡಿತ ಬಿಗಿಗೊಳಿಸಿದ ಟೀಂ ಇಂಡಿಯಾ ಪ್ರವಾಸಿ ತಂಡವನ್ನು 255 ರನ್'ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ವಿಶಾಖಪಟ್ಟಣ(ನ.19): ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್ ದಾಳಿಗೆ ಕಂಗೆಟ್ಟ ಆಂಗ್ಲರ ಪಡೆ ಕೇವಲ 255 ರನ್'ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಹಿನ್ನೆಡೆ ಅನುಭವಿಸಿದೆ. ಈ ಮೂಲಕ ಟೀಂ ಇಂಡಿಯಾ 200 ರನ್'ಗಳ ಮುನ್ನೆಡೆ ಸಾಧಿಸಿದೆ.
ಇಲ್ಲಿನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡ 196 ರನ್'ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ವಿರಾಮದ ಬಳಿಕ ಮತ್ತೆ ಆಂಗ್ಲರ ಮೇಲೆ ಹಿಡಿತ ಬಿಗಿಗೊಳಿಸಿದ ಟೀಂ ಇಂಡಿಯಾ ಪ್ರವಾಸಿ ತಂಡವನ್ನು 255 ರನ್'ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಟೀಂ ಇಂಡಿಯಾ ಪರ ಅಶ್ವಿನ್ 67 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಮೊದಲ ಟೆಸ್ಟ್'ನಲ್ಲಿ ವಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದ ಅಶ್ವಿನ್ ಎರಡನೆ ಟೆಸ್ಟ್'ನಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್: 455/10
ವಿರಾಟ್ ಕೊಹ್ಲಿ 167
ಇಂಗ್ಲೆಂಡ್ ಮೊದಲ ಇನಿಂಗ್ಸ್: 255/10
ಬೆನ್ ಸ್ಟೋಕ್ಸ್ 70
