ಇಂಗ್ಲೆಂಡ್'ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್'ಮನ್'ಗಳಾದ ಮೋಯಿನ್ ಅಲಿ(117) ಹಾಗೂ ಬೆನ್ ಸ್ಟ್ರೋಕ್(128) ಭರ್ಜರಿ ಶತಕ ಬಾರಿಸುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ರಾಜ್'ಕೋಟ್(ನ.10): ಭಾರತ ಬೌಲಿಂಗ್ ಪಡೆಗೆ ದಿಟ್ಟ ಉತ್ತರ ನೀಡಿದ ಇಂಗ್ಲೆಂಡ್ ತಂಡ ಪ್ರಥಮ ಟೆಸ್ಟ್ ಮೊದಲ ಇನಿಂಗ್ಸ್'ನಲ್ಲಿ 537 ರನ್'ಗಳ ಬೃಹತ್ ಮೊತ್ತ ಕಲೆಹಾಕಿದೆ.

ಇಂಗ್ಲೆಂಡ್'ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್'ಮನ್'ಗಳಾದ ಮೋಯಿನ್ ಅಲಿ(117) ಹಾಗೂ ಬೆನ್ ಸ್ಟ್ರೋಕ್(128) ಭರ್ಜರಿ ಶತಕ ಬಾರಿಸುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್'ನಲ್ಲಿ 537 ರನ್ ಗಳಿಸಿ ಸರ್ವಪತನ ಕಂಡಿತು.

ಭಾರತದ ಪರ ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದು ಮಿಂಚಿದರೆ, ಮೊಹಮದ್ ಶಮಿ, ಉಮೇಶ್ ಯಾದವ್, ಆಶ್ವಿನ್ ತಲಾ ಎರಡು ಹಾಗೂ ಅಮಿತ್ ಮಿಶ್ರಾ ಒಂದು ವಿಕೆಟ್ ಪಡೆದರು.