ಕುಲದೀಪ್ ಪ್ರದರ್ಶನದ ಕುರಿತು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದೇನು?

ENG vs IND 2018: Sourav Ganguly backs Kuldeep Yadav to play all 3 formats for India
Highlights

ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಸೂಪರ್ ಪರ್ಫಾಮೆನ್ಸ್‌ಗೆ ಮಾಜಿ ನಾಯಕ ಪ್ರಶಂಸಿದ್ದಾರೆ. ಇಷ್ಟೇ ಅಲ್ಲ ಕುಲದೀಪ್ ಪರ ಟೀಂ ಇಂಡಿಯಾ ಆಯ್ಕೆ ಸಮಿತಿಗೂ ಗಂಗೂಲಿ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಗಂಗೂಲಿ ಮಾಡಿದ ಮನವಿ ಏನು?  ಇಲ್ಲಿದೆ.

ಓಲ್ಡ್ ಟ್ರಾಫೋರ್ಡ್(ಜು.04): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಆಂಗ್ಲರಿಗೆ ಶಾಕ್ ನೀಡಿದ ಕುಲದೀಪ್ ಯಾದವ್ ಪ್ರದರ್ಶನಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಪಿಚ್‌ನಲ್ಲಿ 5 ವಿಕೆಟ್ ಕಬಳಿಸೋ ಮೂಲಕ ಕುಲದೀಪ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹೀಗಾಗಿ ಕುಲದೀಪ್ ಯಾದವ್‌ಗೆ ಟಿ20 ಮಾತ್ರವಲ್ಲ, ಏಕದಿನ ಹಾಗೂ ಟೆಸ್ಟ್ ತಂಡದಲ್ಲೂ ಖಾಯಂ ಸ್ಥಾನ ನೀಡಬೇಕು ಎಂದು ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ.

ಕುಲದೀಪ್ ಯಾದವ್ ಪಂದ್ಯದಿಂದ ಪಂದ್ಯಕ್ಕೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪರಿಪಕ್ವ ಕ್ರಿಕೆಟರ್ ಆಗಿ ರೂಪುಗೊಂಡಿದ್ದಾರೆ. ಹೀಗಾಗಿ ಭಾರತ ತಂಡದ ಮೂರು ಮಾದರಿಯಲ್ಲಿ ಕುಲದೀಪ್ ಖಾಯಂ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

loader