ಟೀಂ ಇಂಡಿಯಾ ಕ್ರಿಕೆಟಿಗರು ಶೈಕ್ಷಣಿಕ ಅರ್ಹತೆಗಳೇನು..?

Educational qualifications of Indian cricketers
Highlights

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಪ್ರತಿ ಕ್ರಿಕೆಟ್ ಅಭಿಮಾನಿಯೂ ತನ್ನ ನೆಚ್ಚಿನ ಆಟಗಾರನ ಬಗ್ಗೆ ತಿಳಿದಿರುತ್ತಾನೆ. ಆತನ ವೃತ್ತಿಪರ ಹಾಗೂ ಖಾಸಗಿ ಬದುಕಿನ ಕುತೂಹಲಕರ ಮಾಹಿತಿಯ ಬಗ್ಗೆ ಅರಿವಿರುತ್ತದೆ.

ಬೆಂಗಳೂರು[ಜೂ.14]: ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಪ್ರತಿ ಕ್ರಿಕೆಟ್ ಅಭಿಮಾನಿಯೂ ತನ್ನ ನೆಚ್ಚಿನ ಆಟಗಾರನ ಬಗ್ಗೆ ತಿಳಿದಿರುತ್ತಾನೆ. ಆತನ ವೃತ್ತಿಪರ ಹಾಗೂ ಖಾಸಗಿ ಬದುಕಿನ ಕುತೂಹಲಕರ ಮಾಹಿತಿಯ ಬಗ್ಗೆ ಅರಿವಿರುತ್ತದೆ. ತನ್ನ ನೆಚ್ಚಿನ ಕ್ರಿಕೆಟಿಗ ನೀಡುವ ಜಾಹೀರಾತಿನ ಬಗ್ಗೆ ಅರಿವಿರುತ್ತದೆ. ಆದರೆ ಆತನ ಶೈಕ್ಷಣಿಕ ಮಾಹಿತಿ ಸಿಗುವುದು ಕಡಿಮೆ. ನಾವು ಆ ಮಾಹಿತಿ ನೀಡುತ್ತಿದ್ದೇವೆ ನೋಡಿ..
1. ಅಜಿಂಕ್ಯ ರಹಾನೆ: ಮುಂಬೈ ಮೂಲದ ಕ್ರಿಕೆಟಿಗ. 


ಶಿಕ್ಷಣ: ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿ ಪೂರೈಸಿದ್ದಾರೆ.
2. ರವಿಚಂದ್ರನ್ ಅಶ್ವಿನ್: ಅನುಭವಿ ಆಲ್ರೌಂಡರ್


ಶಿಕ್ಷಣ: ಚೆನ್ನೈನ ಶ್ರೀ ಸುಬ್ರಮಣ್ಯ ನಾಡಾರ್ ಕಾಲೇಜ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
3. ರೋಹಿತ್ ಶರ್ಮಾ:

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಓದಿದ್ದು ಕೇವಲ ಪಿಯುಸಿ ಮಾತ್ರ. ಶಾಲಾ ಮಟ್ಟದಲ್ಲೇ ಗಮನಾರ್ಹ ಪ್ರದರ್ಶನ ಶರ್ಮಾ ಓದುವುದಕ್ಕೆ ಗುಡ್ ಬೈ ಹೇಳಿ ಕ್ರಿಕೆಟ್’ನತ್ತ ಗಮನ ಹರಿಸಿದ್ದರು. ಅಂದಹಾಗೆ ಶರ್ಮಾ ಓದಿದ್ದು ಮುಂಬೈನ ರಿಜ್ವಿ ಕಾಲೇಜಿನಲ್ಲಿ.
4. ಶಿಖರ್ ಧವನ್:

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದೇ 2013ರಲ್ಲಿ. ಧವನ್ ಕೂಡಾ ಓದಿದ್ದು ಕೇವಲ ಪಿಯುಸಿ ಮಾತ್ರ. ದೆಹಲಿಯ ಪಶ್ಚಿಮ್ ವಿಹಾರ್’ನಲ್ಲಿರುವ ಸೇಂಟ್ ಮಾರ್ಕ್ಸ್ ಸೀನಿಯರ್ ಸಕೆಂಡರಿ ಸ್ಕೂಲ್’ನಲ್ಲಿ ಧವನ್ ಪಿಯುಸಿ ಓದಿದ್ದರು.
5. ಸುರೇಶ್ ರೈನಾ:

ಎಡಗೈ ಪ್ರತಿಭಾನ್ವಿತ ಕ್ರಿಕೆಟಿಗ ಸುರೇಶ್ ರೈನಾ ಕೂಡಾ ಓದಿದ್ದು ಪಿಯುಸಿ ಮಾತ್ರ. ಕ್ರಿಕೆಟ್’ನತ್ತ ಒಲವು ಹೆಚ್ಚಿದ್ದರಿಂದ ರೈನಾ ಪಿಯುಸಿಗೆ ಓದು ನಿಲ್ಲಿಸಿದ್ದರು. ಆ ಬಳಿಕ ಲಖ್ನೋದಲ್ಲಿ ಕ್ರೀಡಾ ಕಾಲೇಜಿನಲ್ಲಿ ಡೆಲ್ಲಿ ವಿವಿಯಿಂದ ದೂರಶಿಕ್ಷಣ ಪಡೆದು ಬಿ. ಕಾಂ ಪೂರೈಸಿದ್ದಾರೆ.
6. ಎಂ.ಎಸ್ ಧೋನಿ:

ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎಂ.ಎಸ್. ಧೋನಿ. ಸೇಂಟ್ ಕ್ಸೇವಿಯರ್ ಕಾಲೇಜು ಸೇರಿದ್ದರೂ ಕ್ರಿಕೆಟ್ ಮೇಲಿನ ಆಸಕ್ತಿಯಿಂದಾಗಿ ಅಂತಿಮ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಸೇಂಟ್ ಕ್ಸೇವಿಯರ್ ಕಾಲೇಜು ಗೌರವಾನ್ವಿತ ಪದವಿ ನೀಡಿದೆ.
7. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಈ ಕಾಲಘಟ್ಟದ ಶ್ರೇಷ್ಠ ಕ್ರಿಕೆಟಿಗನೆಂದು ಕರೆಸಿಕೊಳ್ಳುತ್ತಿದ್ದಾರೆ. ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟಿರುವ ಕೊಹ್ಲಿ ದೆಹಲಿಯ ವಿಶಾಲ್ ಭಾರತಿ ಸ್ಕೂಲ್’ನಲ್ಲಿ ಪಿಯುಸಿ ಪೂರೈಸಿದ್ದಾರೆ.
8. ಯುವರಾಜ್ ಸಿಂಗ್:

2011ರ ವಿಶ್ವಕಪ್ ಹೀರೋ ಯುವರಾಜ್ ಸಾಕಷ್ಟು ಬಾರಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ. ಕ್ರಿಕೆಟ್ ಆಸಕ್ತಿಯಿಂದಾಗಿ ಹೈಸ್ಕೂಲ್ ಹಂತದಲ್ಲಿ ಯುವಿ ಓದಿಗೆ ಗುಡ್’ಬೈ ಹೇಳಿದ್ದರು. ಯುವಿ ಹೈಸ್ಕೂಲ್ ಓದಿದ್ದು ಚಂಡೀಘಡದ ಡಿಎವಿ ಪಬ್ಲಿಕ್ ಶಾಲೆಯಲ್ಲಿ.
09. ಹಾರ್ದಿಕ್ ಪಾಂಡ್ಯ:

ಬರೋಡಾದ ಯುವ ಪ್ರತಿಭೆ ಹಾರ್ದಿಕ್ ಪಾಂಡ್ಯ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. ಕ್ರಿಕೆಟ್’ನಲ್ಲಿ ಮೂಡಿಸಿದ ಛಾಪನ್ನು ಪಾಂಡ್ಯ ಓದಿನಲ್ಲಿ ತೋರಿಸಿಲ್ಲ. ಕೇವಲ 9ನೇ ಕ್ಲಾಸ್ ಪೂರೖಸಲು ಪಾಂಡ್ಯಗೆ ಸಾಧ್ಯವಾಗಲಿಲ್ಲ.
10. ಜಾವಗಲ್ ಶ್ರೀನಾಥ್: 

ಜಾವಗಲ್ ಎಕ್ಸಪ್ರೆಸ್ ಖ್ಯಾತಿಯ ಶ್ರೀನಾಥ್ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದಾರೆ.
11. ಅನಿಲ್ ಕುಂಬ್ಳೆ:

ಟೀಂ ಇಂಡಿಯಾದ ಯಶಸ್ವಿ ಸ್ಪಿನ್ನರ್ ಅನಿಲ್ ಕುಂಬ್ಳೆ ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಹೆಮ್ಮೆಯ ಕನ್ನಡಿಗ ಕುಂಬ್ಳೆ ಪಿಯುಸಿ ಓದಿದ್ದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಆ ಬಳಿಕ ಆರ್’ವಿ ಕಾಲೇಜ್ ಆಫ್ ಎಂಜಿನಿಯರಿಂಗ್’ನಲ್ಲಿ ಮೆಕನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಇ ಪಡೆದಿದ್ದಾರೆ.

loader