2018ರ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ20, ಮೂರು ಏಕದಿನ ಹಾಗೂ 5 ಟೆಸ್ಟ್‌'ಗಳನ್ನು ಆಡಲಿದೆ.

ಲಂಡನ್(ಸೆ.06): ಈಗಾಗಲೇ ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸದಲ್ಲಿರುವ ಕೊಹ್ಲಿ ಪಡೆಗೆ ಮುಂದಿನ ವರ್ಷ ಹೊಸ ಸವಾಲು ಎದುರಾಗಲಿದೆ. 2019ರ ಏಕದಿನ ವಿಶ್ವಕಪ್'ಗೂ ಮುನ್ನ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ತಲಾ ಮೂರು ಟಿ20, ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2018ರ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ20, ಮೂರು ಏಕದಿನ ಹಾಗೂ 5 ಟೆಸ್ಟ್‌'ಗಳನ್ನು ಆಡಲಿದೆ.

ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದ್ದು, ಜುಲೈ 3ರಂದು ಮೊದಲ ಟಿ20 ನಡೆಯಲಿದ್ದು, ಜುಲೈ 12ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.

ಇನ್ನು ಆ.1ರಿಂದ ಎಜ್‌'ಬಾಸ್ಟನ್‌'ನಲ್ಲಿ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಸೆ.7ರಿಂದ ದಿ ಓವಲ್‌'ನಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ.