ಮುಂಬೈ(ನ.07): ಟೀಂ ಇಂಡಿಯಾದಲ್ಲಿ ಹೆಚ್ಚು ಟೀಕೆಗೆ ಹಾಗೂ ಟ್ರೋಲ್‌ಗೆ ಒಳಗಾಗಿದ್ದು ಕೋಚ್ ರವಿ ಶಾಸ್ತ್ರಿ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ 1-4 ಅಂತರದ ಸೋಲಿಗೆ ರವಿ ಶಾಸ್ತ್ರಿ ಮೇಲೆ ಎಲ್ಲರು ಹರಿಹಾಯ್ದಿದ್ದರು. ಇಷ್ಟೇ ಅಲ್ಲ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ರವಿ ಶಾಸ್ತ್ರಿ ಕೋಚ್ ಆಯ್ಕೆಯನ್ನ ಹಲವು ಭಾರಿ ಪ್ರಶ್ನಿಸಿದ್ದಾರೆ. ಇನ್ನು ಟ್ವಿಟರಿಗರಿಗೂ ಹಲವು ಭಾರಿ ಆಹಾರವಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೂರು ಸರಣಿ ಗೆದ್ದರೂ ಮತ್ತೆ ರವಿ ಶಾಸ್ತ್ರಿ ಟ್ರೋಲ್ ಆಗಿದ್ದಾರೆ. ಈ ಬಾರಿ ರವಿ ಶಾಸ್ತ್ರಿ ಟ್ರೋಲ್ ಆಗಿರುವುದು ಡುಪ್ಲಿಕೇಟ್ ರವಿ ಶಾಸ್ತ್ರಿಯಿಂದ. ಕೋಚ್ ರವಿ ಶಾಸ್ತ್ರಿ ಹೋಲುವ ವ್ಯಕ್ತಿಯೊಬ್ಬರು ಮುಂಬೈ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಇದೇ ಫೋಟೋ ಬಳಸಿ ಟ್ವಿಟರಿಗರು ರವಿ ಶಾಸ್ತ್ರಿಯನ್ನ ಟ್ರೋಲ್ ಮಾಡಿದ್ದಾರೆ. ಟ್ವಿಟರಿಗರ ಟ್ರೋಲ್ ಇಲ್ಲಿದೆ.

 

 

;