ಬೆಂಗಳೂರು[ಸೆ.05]: ಜಯದೇವ್ ಉನಾದ್ಕತ್ ಅಮೋಘ ಬೌಲಿಂಗ್ ನೆರವಿನಿಂದ ದುಲೀಪ್‌ ಟ್ರೋಫಿ ಫೈನಲ್‌ ಮೊದಲ ದಿನದಾಟದಲ್ಲಿ ಭಾರತ ಗ್ರೀನ್‌ ವಿರುದ್ಧ ಭಾರತ ರೆಡ್‌ ಮೇಲುಗೈ ಸಾಧಿಸಿದೆ. 

ದುಲೀಪ್‌ ಟ್ರೋಫಿ ಫೈನಲ್‌: ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ಕೆ

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯು​ತ್ತಿ​ರುವ ಪಂದ್ಯದ ಮೊದಲ ದಿನ​ದಾಟದಲ್ಲಿ ಕೇವಲ 49 ಓವರ್‌ ಆಟ ಮಾತ್ರ ಸಾಧ್ಯ​ವಾ​ಯಿತು. ಮಳೆ ಹಾಗೂ ಮಂದ ಬೆಳ​ಕು ಆಟಕ್ಕೆ ಅಡ್ಡಿ​ಯಾ​ಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿ​ಕೊಂಡ ಭಾರತ ಗ್ರೀನ್‌, ಮೊದಲ ದಿನ​ದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿ​ಸಿದೆ. 

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ವೇಗಿ ಜೈದೇವ್‌ ಉನಾ​ದ್ಕತ್‌ 4 ವಿಕೆಟ್‌ ಕಿತ್ತು ಮಿಂಚಿ​ದರು. ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆ 32 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದಾರೆ.

ಸ್ಕೋರ್‌:

ಭಾರತ ಗ್ರೀನ್‌ 49 ಓವರಲ್ಲಿ 147/8

(ಮೊದಲ ದಿನದಂತ್ಯಕ್ಕೆ)