ಬೆಂಗಳೂರು[ಸೆ.04]: ಭಾರತ ರೆಡ್‌ ಹಾಗೂ ಗ್ರೀನ್ ತಂಡಗಳ ನಡುವಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ದುಕೊಂಡಿದೆ.

ದುಲೀಪ್‌ ಟ್ರೋಫಿ: ರೆಡ್‌-ಗ್ರೀನ್‌ ಫೈನ​ಲ್‌

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2019-20ನೇ ಸಾಲಿನ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯ ಆರಂಭವಾಗಿದೆ. ಮೊದಲ 15 ಓವರ್ ಮುಕ್ತಾಯದ ವೇಳೆಗೆ ಇಂಡಿಯಾ ಗ್ರೀನ್ ತಂಡವು 1 ವಿಕೆಟ್ ಕಳೆದುಕೊಂಡು 50 ರನ್ ಬಾರಿಸಿದೆ. ಗ್ರೀನ್ ನಾಯಕ ಫೈಜ್ ಫಜಲ್ 12 ರನ್ ಗಳಿಸಿ ಜಯದೇವ್ ಉನಾದ್ಕತ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಆಕಾಶ್ ರೆಡ್ಡಿ 12 ಹಾಗೂ ಧೃವ್ ಶೋರೆ 21 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. 

ದುಲೀಪ್‌ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್‌

ಪ್ರಿಯಾಂಕ್‌ ಪಾಂಚಾಲ್‌ ನೇತೃತ್ವದ ಭಾರತ ರೆಡ್‌ ಮೂರು ಪಂದ್ಯಗಳಿಂದ 6 ಅಂಕಗಳನ್ನು ಸಂಪಾದಿಸಿ ಫೈನಲ್‌ಗೇರಿದರೆ, ಭಾರತ ಬ್ಲೂಗಿಂತ ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದ ಕಾರಣ ಫೈಜ್‌ ಫಜಲ್‌ ನೇತೃತ್ವದ ಭಾರತ ಗ್ರೀನ್‌ ಫೈನಲ್‌ ಪ್ರವೇಶಿಸಿತು. ಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿಯಾ​ಗುವ ಸಾಧ್ಯತೆ ಇದೆ.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2