ನವದೆಹಲಿ(ಮಾ.14): ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟಿ20 ಟೂರ್ನಿಯ ಪ್ರಸಾರ ಪುನಾರಂಭಗೊಂಡಿದೆ. ಟೂರ್ನಿ ಆರಂಭಗೊಂಡು 3 ದಿನಗಳ ಬಳಿಕ ಪ್ರಸಾರವನ್ನು ಡಿಸ್ಪೋರ್ಟ್ಸ್ ವಾಹಿನಿ ಸ್ಥಗಿತಗೊಳಿಸಿತ್ತು.ಆದರೆ ಮಂಗಳವಾರ ದಿಢೀರನೆ ಪಂದ್ಯಗಳ ಪ್ರಸಾರವನ್ನು ಡಿಸ್ಪೋರ್ಟ್ಸ್ ಆರಂಭಿಸಿದೆ. 

ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಬಿಗ್ ಶಾಕ್ ನೀಡಿದ IMG ರಿಲಯನ್ಸ್!

 ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಪ್ರಕಟಣೆ ಇಲ್ಲವೇ ಹೇಳಿಕೆ ನೀಡಿಲ್ಲ. 4ನೇ ಆವೃತ್ತಿಯ ಪಿಎಸ್‌ಎಲ್‌ ಪ್ಲೇ-ಆಫ್‌ ಹಂತ ತಲುಪಿದ್ದು, ಕರಾಚಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಪುಲ್ವಾಮಾ ದಾಳಿ ಬೆನ್ನಲ್ಲೇ ಡಿ ಸ್ಪೋರ್ಟ್ ವಾಹಿನಿ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರ ಸ್ಥಗಿತಗೊಳಿಸಿ ಆರ್ಥಿಕ ಹೊಡೆತ ನೀಡಿತ್ತು. 

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಶಾಕ್- PSL ಟೂರ್ನಿಯಿಂದ ಡಿವಿಲಿಯರ್ಸ್ ವಾಪಾಸ್!

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ಭಯೋತ್ಪಾದಕ ನಡೆಸಿದ ಬಾಂಬ್ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರಗಳನ್ನ ಭಾರತ ಸ್ಥಗಿತಗೊಳಿಸಿತ್ತು.