ಡಿಆರ್‌ಎಸ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಳವಡಿಸಲಾಗುತ್ತಿದೆ. ಕ್ರಿಕೆಟ್ ಆಟಗಾರರಾಗಿರುವವರು ಡಿಆರ್‌ಎಸ್ ವ್ಯವಸ್ಥೆ ವಿಜ್ಞಾನಕ್ಕಿಂತ ದೊಡ್ಡದಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
ರಾಜ್ಕೋಟ್(ನ.08): ಅಂಪೈರ್ ತೀರ್ಪಿನ ವಿಶ್ಲೇಷಣೆ (ಡಿಆರ್ಎಸ್) ‘ರಾಕೆಟ್ ವಿಜ್ಞಾನ’ವಲ್ಲ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಡಿಆರ್ಎಸ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಳವಡಿಸಲಾಗುತ್ತಿದೆ. ಕ್ರಿಕೆಟ್ ಆಟಗಾರರಾಗಿರುವವರು ಡಿಆರ್ಎಸ್ ವ್ಯವಸ್ಥೆ ವಿಜ್ಞಾನಕ್ಕಿಂತ ದೊಡ್ಡದಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
ಅಂಪೈರ್ ತೀರ್ಪಿನ ವಿಶ್ಲೇಷಣೆಗಾಗಿ ಇರುವ ಮತ್ತೊಂದು ಸಾಧನವಾಗಿದೆ. ಪಂದ್ಯದಲ್ಲಿ ಬೌಲರ್ ಎಸೆದ ಚೆಂಡು, ಪ್ಯಾಡ್ಗೆ ಬಡಿಯಿತೊ, ಅದು ಲೈನ್ನಲ್ಲಿತ್ತಾ ಅಥವಾ ಲೈನ್ನ ಬದಿಯಲ್ಲಿತ್ತಾ ಎನ್ನುವುದನ್ನು ಕೂಲಂಕುಷವಾಗಿ ಪರಿಶೀಲಿಸಲು ಡಿಆರ್ಎಸ್ ನೆರವಾಗಲಿದೆ ಎಂದು ಕೊಹ್ಲಿ ತಿಳಿಸಿದರು.
