ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಪ್ರತಿಕ್ರಿಯಿಸಿದ ದ್ರಾವಿಡ್, ಪ್ರದರ್ಶನಕ್ಕೂ - ನಾಯಕತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಮೊಹಾಲಿ(ಏ.30): ಪ್ರಸಕ್ತ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದ ನಿರ್ಧಾರವನ್ನು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಪ್ರತಿಕ್ರಿಯಿಸಿದ ದ್ರಾವಿಡ್, ಪ್ರದರ್ಶನಕ್ಕೂ - ನಾಯಕತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

‘‘ಒಂದೊಮ್ಮೆ ಜಹೀರ್‌ಖಾನ್ ಗಾಯಗೊಂಡರೆ ಕರುಣ್ ನಾಯರ್‌ಗೆ ಆ ಜವಾಬ್ದಾರಿ ನೀಡಬೇಕೆಂದು ಮೊದಲೇ ತೀರ್ಮಾನಿಸಿದ್ದೇವು. ಏಕೆಂದರೆ ಕಳೆದ ಬಾರಿ ಉಪನಾಯಕರಾಗಿದ್ದ ಜೆ.ಪಿ.ಡುಮಿನಿ, ಕ್ವಿಂಟನ್ ಡಿಕಾಕ್ ಇದೀಗ ತಂಡದಲ್ಲಿ ಇಲ್ಲ’’ಎಂದಿದ್ದಾರೆ.

‘‘ಕರುಣ್ ಜೂನಿಯರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಬ್ಯಾಟಿಂಗ್ ಲಯ ತಾತ್ಕಲಿಕ ಸಮಸ್ಯೆಯಷ್ಟೇ. ಅದಕ್ಕಾಗಿ ಅವರಿಗೆ ನಾಯಕತ್ವ ನೀಡದಿದ್ದರೆ ತಪ್ಪಾಗುತ್ತದೆ’’ ಎಂದು ದ್ರಾವಿಡ್ ಹೇಳಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ 8 ಪಂದ್ಯಗಳಿಂದ ಕರುಣ್ ಕೇವಲ 89 ರನ್‌ಗಳಿಸಿದ್ದು, ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ.