ಟೀಂ ಇಂಡಿಯಾ ನಾಯಕನಿಗೆ ಡಕ್ವರ್ಥ್ ಲೂಯಿಸ್ ನಿಯಮ ಅರ್ಥವಾಗಿಲ್ಲ ಅಂದ್ರೆ, ಸಾಮಾನ್ಯ ಜನರ ಪಾಡೇನು..? ಅಲ್ವಾ..?

ರಾಂಚಿ(ಅ.09): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಡಕ್ವರ್ತ್ ಲೂಯಿಸ್ ನಿಯಮ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಡಕ್ವರ್ತ್ ಲೂಯಿಸ್ ನಿಯಮದನ್ವಯ 6 ಓವರ್'ಗಳಲ್ಲಿ 48 ರನ್ ಗುರಿ ನೀಡಲಾಗಿತ್ತು.

ಗೆಲುವಿನ ಬಳಿಕ ಮಾತನಾಡಿದ ಕೊಹ್ಲಿ ‘ಡಕ್ವರ್ತ್ ಲೂಯಿಸ್ ನಿಯಮ ನಿಜಕ್ಕೂ ಅರ್ಥವಾಗುವುದಿಲ್ಲ. ಆಸ್ಟ್ರೇಲಿಯಾವನ್ನು 118ಕ್ಕೆ ನಿಯಂತ್ರಿಸಿದ ಬಳಿಕ 40 ಅಥವಾ ಅದಕ್ಕಿಂತ ಕಡಿಮೆ ಗುರಿ ಸಿಗಲಿದೆ ಎಂದುಕೊಂಡಿದ್ದೆವು. ಆದರೆ 48 ರನ್ ಗುರಿ ನಿಗದಿಯಾಗಿದ್ದು ಅಚ್ಚರಿ ಮೂಡಿಸಿತು. ಜತೆಗೆ ಗುರಿ ಬೆನ್ನಟ್ಟುವುದು ಸ್ವಲ್ಪ ಕಷ್ಟವೂ ಆಯಿತು’ ಎಂದಿದ್ದಾರೆ.

ಟೀಂ ಇಂಡಿಯಾ ನಾಯಕನಿಗೆ ಡಕ್ವರ್ಥ್ ಲೂಯಿಸ್ ನಿಯಮ ಅರ್ಥವಾಗಿಲ್ಲ ಅಂದ್ರೆ, ಸಾಮಾನ್ಯ ಜನರ ಪಾಡೇನು..? ಅಲ್ವಾ..?