"ವಾಸ್ತವವಾಗಿ ಕೊಹ್ಲಿಯನ್ನು ಯುವ ಆಟಗಾರ ಬಾಬರ್ ಆಜಂ ಅವರಿಗೆ ಹೋಲಿಸಬಹುದು"- ಉಮರ್ ಅಕ್ಮಲ್

ಕರಾಚಿ(ಫೆ.22): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ತನ್ನೊಂದಿಗೆ ಹೋಲಿಕೆ ಮಾಡುವುದು ಸಲ್ಲ ಎಂದು ಪಾಕಿಸ್ತಾನದ ವಿಕೆಟ್‌ಕೀಪರ್ - ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘‘ಕೊಹ್ಲಿ ವೃತ್ತಿಬದುಕಿಗೆ ಕಾಲಿಟ್ಟ ಘಳಿಗೆಯಿಂದಲೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌'ಗೆ ಇಳಿಯುತ್ತಾರೆ. ನಾನು 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತೇನೆ ಅದು ಹೇಗೆ ನನ್ನನ್ನು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯ’’ ಎಂದು ಪಾಕಿಸ್ತಾನ ತಂಡದ ಆಟಗಾರ ಕಮ್ರನ್ ಅಕ್ಮಲ್ ಪ್ರಶ್ನಿಸಿದ್ದಾರೆ.

‘‘ವಾಸ್ತವವಾಗಿ ಕೊಹ್ಲಿಯನ್ನು ಯುವ ಆಟಗಾರ ಬಾಬರ್ ಆಜಂ ಅವರಿಗೆ ಹೋಲಿಸಬಹುದು. ಏಕೆಂದರೆ, ಇವರೀರ್ವರ ಬ್ಯಾಟಿಂಗ್ ಶೈಲಿ ಒಂದೇ ಆಗಿದೆ. ಮೇಲಾಗಿ ಬಾಬರ್ ಕೂಡ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ’’ ಎಂದು ಅಕ್ಮಲ್ ತಿಳಿಸಿದ್ದಾರೆ.