ಇಂದು ಡೈಮಂಡ್‌ ಲೀಗ್‌: ನೀರಜ್‌ ಚೋಪ್ರಾ ಮೇಲೆ ಎಲ್ಲರ ಚಿತ್ತ

ಇಂದು ದೋಹಾದಲ್ಲಿ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆ ಆರಂಭ
ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮೇಲೆ ಎಲ್ಲರ ಚಿತ್ತ
ಜ್ಯುರಿಚ್‌ನ ಡೈಮಂಡ್‌ ಲೀಗ್‌ ಫೈನ​ಲ್‌​ನ​ಲ್ಲಿ ಚಾಂಪಿ​ಯನ್‌ ಆಗಿದ್ದ ನೀರಜ್‌ ಚೋಪ್ರಾ

Doha Diamond League Neeraj Chopra gears up to conquer new target kvn

ದೋಹಾ(ಮೇ.05​): ಭಾರ​ತ​ದ ತಾರಾ ಜಾವೆ​ಲಿನ್‌ ಎಸೆ​ತ​ಗಾರ, ಹಾಲಿ ಚಾಂಪಿ​ಯ​ನ್‌ ನೀರಜ್‌ ಚೋಪ್ರಾ ಶುಕ್ರ​ವಾ​ರ​ ದೋಹಾ ಡೈಮಂಡ್‌ ಲೀಗ್‌​ನಲ್ಲಿ ಸ್ಪರ್ಧಿ​ಸ​ಲಿದ್ದು, ಈ ಬಾರಿ ಕಠಿಣ ಸ್ಪರ್ಧೆ ಎದು​ರಾ​ಗುವ ಸಾಧ್ಯತೆ ಇದೆ. ಒಲಿಂಪಿಕ್‌ ಚಾಂಪಿಯನ್‌ ಕೂಡಾ ಆಗಿ​ರುವ 25 ವರ್ಷದ ನೀರಜ್‌ ವಿರುದ್ಧ ಹಾಲಿ ವಿಶ್ವ ಚಾಂಪಿ​ಯನ್‌ ಗ್ರೆನಾಡದ ಆ್ಯಂಡ​ರ್‌​ಸನ್‌ ಪೀಟರ್ಸ್‌, ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಚೆಕ್‌ ಗಣ​ರಾ​ಜ್ಯದ ಜಾಕುಬ್‌ ಕೂಡಾ ಸ್ಪರ್ಧಿ​ಸ​ಲಿ​ದ್ದಾರೆ.

ನೀರ​ಜ್‌ ಕಳೆದ ವರ್ಷ ಜ್ಯುರಿಚ್‌ನಲ್ಲಿ ನಡೆ​ದಿದ್ದ ಡೈಮಂಡ್‌ ಲೀಗ್‌ ಫೈನ​ಲ್‌​ನ​ಲ್ಲಿ ಚಾಂಪಿ​ಯನ್‌ ಆಗಿ​, ಈ ಸಾಧನೆ ಮಾಡಿದ ಮೊದಲ ಭಾರ​ತೀಯ ಎಂಬ ಹೆಗ್ಗ​ಳಿ​ಕೆಗೆ ಪಾತ್ರ​ರಾ​ಗಿ​ದ್ದರು.ಇದೀಗ ದೋಹಾದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 90 ಮೀಟರ್ ದೂರ ಜಾವೆಲಿನ್ ಎಸೆಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ.

ವಿಶ್ವ ಬಾಕ್ಸಿಂಗ್‌: ಭಾರ​ತ​ದ ಮೂವರು ಪ್ರಿ ಕ್ವಾರ್ಟ​ರ್‌​ಗೆ

ತಾಷ್ಕೆಂಟ್‌: ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತದ ಮತ್ತೆ ಮೂವರು ಬಾಕ್ಸ​ರ್‌​ಗಳು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ಗುರು​ವಾರ 92+ ಕೆ.ಜಿ. ವಿಭಾ​ಗ​ದಲ್ಲಿ ನರೇಂದರ್‌ ತಜ​ಕಿ​ಸ್ತಾ​ನದ ಅಬ್ರೊ​ರಿ​ದಿ​ನೊವ್‌ರನ್ನು 4-1ರಿಂದ ಮಣಿಸಿ ಮುಂದಿನ ಸುತ್ತಿ​ಗೇ​ರಿ​ದರು. ಇದೇ ವೇಳೆ 48 ಕೆ.ಜಿ. ವಿಭಾ​ಗ​ದಲ್ಲಿ ಗೋವಿಂದ್‌ ಸಹಾ​ನಿ ತಜ​ಕಿ​ಸ್ತಾ​ನದ ಮೆಹ್ರೊನ್‌ ವಿರುದ್ಧ 5-0 ಅಂತ​ರ​ದಲ್ಲಿ ಗೆಲುವು ಸಾಧಿ​ಸಿ​ದರೆ, 51 ಕೆ.ಜಿ. ವಿಭಾ​ಗ​ದಲ್ಲಿ ದೀಪಕ್‌ ಕುಮಾರ್‌ ಈಕ್ವೆ​ಡಾ​ರ್‌ನ ಡೆಲ್ಗಾಡೊ ಲೂಯಿ​ಸ್‌​ರನ್ನು 5-0 ಅಂತ​ರ​ದಲ್ಲಿ ಸೋಲಿಸಿ ಪ್ರಿ ಕ್ವಾರ್ಟ​ರ್‌​ಗೇ​ರಿ​ದರು. 

Wrestlers Protest ಪೊಲೀಸರ ಜೊತೆ ಕುಸ್ತಿಪಟುಗಳ ‘ಕುಸ್ತಿ’! ಕಣ್ಣೀರಿಟ್ಟ ಕುಸ್ತಿಪಟುಗಳು

ಶುಕ್ರ​ವಾರ 2 ಬಾರಿ ಕಾಮ​ನ್‌​ವೆಲ್ತ್‌ ಗೇಮ್ಸ್‌ ಪದಕ ವಿಜೇತ ಮಹ​ಮದ್‌ ಹುಸ್ಮು​ದ್ದೀನ್‌(57 ಕೆ.ಜಿ.​), ಒಲಿಂಪಿ​ಯನ್‌ ಆಶಿಶ್‌ ಚೌಧರಿ(80 ಕೆ.ಜಿ.​) ಹಾಗೂ ನವೀನ್‌ ಕುಮಾರ್‌(92 ಕೆ.ಜಿ.​) ಪ್ರಿ ಕ್ವಾರ್ಟ​ರ್‌​ನಲ್ಲಿ ಸೆಣ​ಸ​ಲಿ​ದ್ದಾರೆ.

ಏಷ್ಯಾ​ಕ​ಪ್‌: ಭಾರತ ಹಾಕಿ ತಂಡ​ದಲ್ಲಿ ರಾಜ್ಯದ ಇಬ್ಬ​ರು

ಬೆಂಗ​ಳೂ​ರು: ಮೇ 23ರಿಂದ ಜೂ.1ರ ವರೆಗೂ ಒಮಾನ್‌ನ ಸಲಾ​ಲ​ದಲ್ಲಿ ನಡೆ​ಯ​ಲಿ​ರುವ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾ​ಟಕದ ಇಬ್ಬರು ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಗೋಲ್‌ಕೀಪರ್‌ ಮೋಹಿತ್‌ ಎಚ್‌.ಎಸ್‌ ಹಾಗೂ ಮಿಡ್‌ಫೀಲ್ಡರ್‌ ಸಿ.ಬಿ. ಪೂವಣ್ಣ, 18 ಸದಸ್ಯರ ತಂಡಕ್ಕೆ ಆಯ್ಕೆ​ಯಾ​ಗಿ​ದ್ದಾರೆ. ಉತ್ತಮ್‌ ಸಿಂಗ್‌ ತಂಡ​ವನ್ನು ಮುನ್ನ​ಡೆ​ಸ​ಲಿ​ದ್ದಾರೆ. ಭಾರತ ತಂಡ ಟೂರ್ನಿ​ಯಲ್ಲಿ ಪಾಕಿಸ್ತಾನ, ಜಪಾನ್‌, ಥಾಯ್ಲೆಂಡ್‌, ಚೈನೀಸ್‌ ತೈಪೆ ಜೊತೆ ‘ಎ’ ಗುಂಪಿ​ನ​ಲ್ಲಿದೆ.

ಇಂದಿ​ನಿಂದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಕೂಟ

ಜಿಂಜು​​(​ಕೊ​ರಿ​ಯಾ​): 2024ರ ಪ್ಯಾರಿಸ್‌ ಒಲಿಂಪಿ​ಕ್ಸ್‌ನ ಅರ್ಹತಾ ಟೂರ್ನಿ​ಯಾ​ಗಿ​ರುವ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ಗೆ ಶುಕ್ರ​ವಾರ ಕೊರಿ​ಯಾ​ದಲ್ಲಿ ಚಾಲನೆ ಸಿಗ​ಲಿದ್ದು, ಭಾರತ ಸವಾ​ಲನ್ನು ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು ಮುನ್ನ​ಡೆ​ಸ​ಲಿ​ದ್ದಾರೆ. ಭಾರತದ ಒಟ್ಟು 6 ವೇಟ್‌ಲಿಫ್ಟರ್‌ಗಳು ಕಣ​ಕ್ಕಿ​ಳಿ​ಯ​ಲಿದ್ದು, ಚಾನು 49 ಕೆ.ಜಿ. ವಿಭಾ​ಗ​ದಲ್ಲಿ ಸ್ಪರ್ಧಿ​ಸ​ಲಿದ್ದಾರೆ. ಬಿಂದ್ಯಾ ರಾಣಿ​(55 ಕೆ.ಜಿ.), ಶುಭಂ(61 ಕೆ.ಜಿ.), ಜೆರೆಮಿ ಲಾಲ್ರಿ​ನುಂಗಾ​(67 ಕೆ.ಜಿ.), ಅಚಿಂತಾ ಶೆಹು​ಲಿ​(73 ಕೆ.ಜಿ.) ಹಾಗೂ ನಾರಾ​ಯಣ ಅಜಿ​ತ್‌​(73 ಕೆ.ಜಿ.) ಇತರ ಸ್ಪರ್ಧಿಗಳು.

ಆ​ರ್ಚ​ರಿ: 10 ವಿಭಾ​ಗ​ದ​ಲ್ಲೂ ಭಾರತೀಯರು ಫೈನ​ಲ್‌​ಗೆ

ತಾಷ್ಕೆಂಟ್‌: ಆರ್ಚರಿ ಏಷ್ಯಾಕಪ್‌ 2ನೇ ಹಂತದಲ್ಲಿ ಎಲ್ಲಾ 10 ವಿಭಾ​ಗ​ಗ​ಳಲ್ಲೂ ಭಾರ​ತೀ​ಯರು ಫೈನಲ್‌ ಪ್ರವೇ​ಶಿ​ಸಿದ್ದಾರೆ. ಇಲ್ಲಿ ನಡೆ​ಯು​ತ್ತಿ​ರುವ ಕೂಟ​ದಲ್ಲಿ ಗುರು​ವಾರ ರೀಕರ್ವ್ ಮಿಶ್ರ ತಂಡ ವಿಭಾ​ಗ​ದಲ್ಲಿ ಮೃನಾ​ಲ್‌ ಚೌಹಾ​ಣ್‌-ಸಂಗೀತ ಜೋಡಿ ಉ​ಜ್ಬೇಕಿ​ಸ್ತಾನ ವಿರುದ್ಧ ಗೆದ್ದು ಫೈನ​ಲ್‌​ಗೇ​ರಿದ್ದು, ಚೀನಾದ ಜೋಡಿ ವಿರುದ್ಧ ಶುಕ್ರ​ವಾರ ಚಿನ್ನದ ಪದ​ಕ​ಕ್ಕಾಗಿ ಸ್ಪರ್ಧಿ​ಸ​ಲಿ​ದ್ದಾರೆ. 

ಕಾಂಪೌಂಡ್‌ ಮಿಶ್ರ ತಂಡ ವಿಭಾ​ಗ​ದಲ್ಲಿ ಅಭಿ​ಷೇ​ಕ್‌-ಪರ್‌​ನೀತ್‌ ಕೌರ್‌ ಜೋಡಿ ಸೆಮಿ​ಫೈ​ನ​ಲ್‌​ನಲ್ಲಿ ಇರಾಕ್‌ ಜೋಡಿ ವಿರುದ್ಧ ಜಯಿ​ಸಿತು. ಫೈನ​ಲ್‌​ನಲ್ಲಿ ಇವ​ರಿಗೆ ಕಜ​ಸ್ತಾ​ನ ಜೋಡಿಯ ಸವಾಲು ಎದು​ರಾ​ಗ​ಲಿದೆ. ಈಗಾ​ಗಲೇ ಭಾರತ ನಾಲ್ಕು ತಂಡ ವಿಭಾಗ, ಪುರು​ಷ ಹಾಗೂ ಮಹಿ​ಳೆ​ಯರ ಕಾಂಪೌಡ್‌ ವೈಯಕ್ತಿಕ ವಿಭಾ​ಗ ಮತ್ತು ರೀಕರ್ವ್ ವೈಯ​ಕ್ತಿಕ ವಿಭಾ​ಗ​ಗ​ಳಲ್ಲಿ ಫೈನ​ಲ್‌​ ಪ್ರ​ವೇ​ಶಿ​ಸಿ​ದೆ.

Latest Videos
Follow Us:
Download App:
  • android
  • ios