Asianet Suvarna News Asianet Suvarna News

Wrestlers Protest ಪೊಲೀಸರ ಜೊತೆ ಕುಸ್ತಿಪಟುಗಳ ‘ಕುಸ್ತಿ’! ಪದಕ ವಾಪಸ್‌ ಬೆದ​ರಿ​ಕೆ!

ಹಾಸಿಗೆ ವಿಚಾರದಲ್ಲಿ ವಾಗ್ವಾದ, ಪೊಲೀಸರಿಂದ ಹಲ್ಲೆ ಕುಸ್ತಿ​ಪ​ಟು​ಗಳ ಆರೋಪ
ಕುಸ್ತಿಪಟುಗಳ ಮೇಲೆ ಹಲ್ಲೆ ನಡೆ​ದಿ​ಲ್ಲವೆಂದ ಡೆಲ್ಲಿ ಪೊಲೀ​ಸ​ರು
ಕುಸ್ತಿಪಟುಗಳಿಂದ ಪದಕ ವಾಪಸ್‌ ಬೆದ​ರಿ​ಕೆ!

Wrestlers offer to return medals honours Vinesh Phogat kvn
Author
First Published May 5, 2023, 8:30 AM IST | Last Updated May 5, 2023, 9:50 AM IST

ನವ​ದೆ​ಹ​ಲಿ(ಮೇ.05): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ವಿರುದ್ಧ ಕುಸ್ತಿ​ಪ​ಟು​ಗಳು ಪ್ರತಿ​ಭ​ಟ​ನೆ ನಡೆ​ಸು​ತ್ತಿ​ರುವ ಜಂತರ್‌ ಮಂತ​ರ್‌​ನಲ್ಲಿ ಬುಧ​ವಾರ ರಾತ್ರಿ ಭಾರೀ ಹೈಡ್ರಾಮಾ ಸೃಷ್ಟಿಯಾ​ಗಿದೆ. ಹಾಸಿಗೆ ವಿಚಾ​ರ​ದಲ್ಲಿ ಪೊಲೀ​ಸರು ಹಲ್ಲೆ ನಡೆ​ಸಿ​ದ್ದಾಗಿ ಕುಸ್ತಿ​ಪ​ಟು​ಗಳು ಆರೋ​ಪಿ​ಸಿದ್ದು, ಅದನ್ನು ದೆಹಲಿ ಪೊಲೀ​ಸರು ನಿರಾ​ಕ​ರಿ​ಸಿ​ದ್ದಾರೆ. ಕುಸ್ತಿ​ಪ​ಟು​ಗಳು ಹಾಗೂ ಪೊಲೀ​ಸರು ಹಲ್ಲೆ ವಿಚಾ​ರ​ದಲ್ಲಿ ಪರ​ಸ್ಪರ ಆರೋ​ಪ-ಪ್ರತ್ಯಾ​ರೋಪ ಮಾಡಿದ್ದು, ಪ್ರಕ​ರಣ ಮತ್ತಷ್ಟು ಬಿಗ​ಡಾ​ಯಿ​ಸಿ​ದೆ.

‘ರಾತ್ರಿ ವೇಳೆ ಬಂದ ಪೊಲೀಸರು ನಮ್ಮ ಜನರೇಟರ್‌ ಸೆಟ್‌, ಹಾಸಿಗೆಗಳನ್ನು ಕೊಂಡೊಯ್ದಿದ್ದಾರೆ ಎಂದು’ ಕುಸ್ತಿ​ಪಟು ಭಜರಂಗ್‌ ಪೂನಿಯಾ ಆರೋ​ಪಿ​ಸಿ​ದ್ದಾರೆ. ವಿನೇಶ್‌ ಫೋಗಾಟ್‌ ಕೂಡಾ ಪ್ರತಿ​ಕ್ರಿ​ಯಿ​ಸಿದ್ದು, ‘ನಿಮಗೆ ಕೊಲ್ಲ​ಬೇ​ಕಿ​ದ್ದರೆ ನಮ್ಮನ್ನು ಕೊಲ್ಲ​ಬ​ಹುದು. ನಮ​ಗೆ ಆಹಾರ ಕೂಡಾ ಸೇವಿ​ಸ​ಲಾ​ಗು​ತ್ತಿಲ್ಲ. ಪೊಲೀ​ಸರು ಗನ್‌​ಗ​ಳನ್ನು ಹಿಡಿ​ದಿ​ದ್ದಾರೆ. ಅವರು ನಮ್ಮನ್ನು ಕೊಲ್ಲ​ಬ​ಹು​ದು’ ಎಂದು ಕಣ್ಣೀ​ರಿ​ಟ್ಟಿ​ದ್ದಾರೆ. ಸಂಗೀತಾ ಫೋಗಾಟ್‌, ಸಾಕ್ಷಿ ಮಲಿಕ್‌ ಕೂಡಾ ಮಾಧ್ಯ​ಮ​ಗಳ ಜೊತೆ ಅಳಲು ತೋಡಿ​ಕೊಂಡಿದ್ದಾರೆ.

ಆರೋಪ ಸುಳ್ಳು: ಕುಸ್ತಿ​ಪ​ಟು​ಗಳ ಎಲ್ಲಾ ಆರೋ​ಪ​ಗ​ಳ​ನ್ನು ದೆಹಲಿ ಪೊಲೀ​ಸರು ನಿರಾ​ಕ​ರಿ​ಸಿದ್ದು, ಘಟ​ನೆ​ಯಲ್ಲಿ 5 ಪೊಲೀ​ಸರೇ ಗಾಯ​ಗೊಂಡಿ​ದ್ದಾರೆ ಎಂದಿ​ದ್ದಾರೆ. ‘ಯಾವುದೇ ಹಲ್ಲೆ ನಡೆಸಿಲ್ಲ. ಪ್ರ​ತಿ​ಭ​ಟನಾ ನಿರ​ತರ ಮೇಲೆ ಬಲ​ಪ್ರ​ಯೋಗ ಮಾಡಿಲ್ಲ. ಸ್ಥಳಕ್ಕೆ ಮಡಚಬಹುದಾದ ಹಾಸಿಗೆಗಳನ್ನು ತರಲು ಅನುಮತಿ ಇಲ್ಲ. ಹೀಗಾಗಿ ಕುಸ್ತಿಪಟುಗಳಿಂದ ನಿಯಮ ಉಲ್ಲಂಘನೆಯಾಗಿದ್ದನ್ನು ಪ್ರಶ್ನಿಸಿದ್ದೇವೆ ಅಷ್ಟೇ. ಪೊಲೀ​ಸರು ಕುಡಿದು ಬಂದಿ​ರ​ಲಿಲ್ಲ. ಸಾಕಷ್ಟು ಪ್ರಮಾ​ಣ​ದಲ್ಲಿ ಮಹಿಳಾ ಪೊಲೀ​ಸರನ್ನು ಸ್ಥಳ​ದಲ್ಲಿ ನಿಯೋ​ಜಿ​ಸ​ಲಾ​ಗಿದೆ’ ಎಂದಿ​ದ್ದಾರೆ.

ಕುಸ್ತಿಪಟುಗಳಿಂದ ಪದಕ ವಾಪಸ್‌ ಬೆದ​ರಿ​ಕೆ!

ಪೊಲೀ​ಸರ ಜೊತೆ​ಗಿನ ಸಂಘ​ರ್ಷದ ಬಳಿಕ ಕುಸ್ತಿ​ಪ​ಟು​ಗ​ಳು ಪದಕ, ಪ್ರಶಸ್ತಿ, ಪುರ​ಸ್ಕಾ​ರ​ಗ​ಳ​ನ್ನು ಹಿಂದಿ​ರು​ಗಿ​ಸು​ವು​ದಾಗಿ ಬೆದರಿಕೆ ಹಾಕಿ​ದ್ದಾ​ರೆ. ‘ನಾವು ನಮ್ಮ ಗೌರ​ವ​ಕ್ಕಾಗಿ ಹೋರಾ​ಡು​ತ್ತಿ​ದ್ದೇವೆ. ಆದರೆ ನಮ್ಮನ್ನು ತುಳಿ​ಯ​ಲಾ​ಗು​ತ್ತಿದೆ. ನಮ್ಮನ್ನು ಕೆಟ್ಟ​ದಾಗಿ ನಡೆಸಿಕೊಳ್ಳಲಾಗುತ್ತಿದೆ. ದೇಶಕ್ಕೆ ಹೆಮ್ಮೆ ತಂದ ಕುಸ್ತಿ​ಪ​ಟು​ಗ​ಳ ಜೊತೆ ಈ ರೀತಿ ವರ್ತಿ​ಸು​ವು​ದಾ​ದರೆ ಪದ​ಕ​ಗ​ಳಿಂದ ಏನು ಪ್ರಯೋ​ಜನ?. ನಾವು ಬೇಕಿ​ದ್ದರೆ ಪದ​ಕ​ಗ​ಳನ್ನು ಹಿಂದಿ​ರು​ಗಿ​ಸು​ತ್ತೇವೆ. ಜೀವ ಕೊಡಲೂ ನಾವು ಸಿದ್ಧ. ಆದರೆ ನಮಗೆ ನ್ಯಾಯ ಕೊಡಿ’ ಎಂದು ವಿನೇಶ್‌ ತೀಕ್ಷ್ಣ​ವಾಗಿ ಪ್ರತಿ​ಕ್ರಿ​ಯಿ​ಸಿ​ದ್ದಾರೆ. ಸಾಕ್ಷಿ, ಭಜ​ರಂಗ್‌, ವಿನೇ​ಶ್‌ ಖೇಲ್‌ ರತ್ನ ಪ್ರಶ​ಶ್ತಿಗೆ ಭಾಜ​ನ​ರಾ​ಗಿದ್ದು, ಭಜ​ರಂಗ್‌, ಸಾಕ್ಷಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆ​ದಿದ್ದಾರೆ.

Wrestlers Protest: ಕುಸ್ತಿ​ಪ​ಟು​ಗ​ಳ ಭೇಟಿ​ಯಾ​ದ ಪಿ.ಟಿ. ಉಷಾ!

ಸಾಕ್ಷ್ಯ​ವಿ​ಲ್ಲದೆ ಬಂಧ​ನ ಸಾಧ್ಯ​ವಿ​ಲ್ಲ: ಪೊಲೀ​ಸ್‌

ಈ ನಡುವೆ ಎಫ್‌​ಐ​ಆರ್‌ ದಾಖ​ಲಾ​ದರೂ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರನ್ನು ಬಂಧಿಸದೆ ಇರಲು ಕಾರಣವೇನು ಎನ್ನುವುದನ್ನು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ‘ಬ್ರಿಜ್‌ಭೂಷಣ್‌ ವಿರುದ್ಧದ ಆರೋಪ ಸಾಬೀ​ತು​ಪ​ಡಿ​ಸುವ ಯಾವುದೇ ಸಾಕ್ಷ್ಯಾ​ಧಾರ ಈವ​ರೆಗೂ ಲಭ್ಯ​ವಾ​ಗಿಲ್ಲ. 4 ಅಪ್ರಾಪ್ತ ಅಥ್ಲೀ​ಟ್‌​ಗ​ಳ ಹೇಳಿಕೆ ಪಡೆ​ದು​ಕೊಂಡಿ​ದ್ದೇವೆ. ಫೋನ್‌ ಕರೆ ಮಾಹಿತಿ, ಸಿಸಿಟೀವಿ ದೃಶ್ಯಗಳನ್ನು ಪರಿ​ಶೀ​ಲಿ​ಸಿ​ದ್ದೇವೆ. ಆದರೆ ಸಾಕ್ಷ್ಯಗಳು ಲಭ್ಯ​ವಾ​ಗಿ​ಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸುಪ್ರೀಂ ವಿಚಾ​ರಣೆ ಅಂತ್ಯ

ನವದೆಹಲಿ: ಬ್ರಿಜ್‌ಭೂಷಣ್‌ ವಿರು​ದ್ಧ ಕುಸ್ತಿ​ಪ​ಟು​ಗಳ ಅರ್ಜಿ ವಿಚಾ​ರ​ಣೆ​ಯನ್ನು ಸುಪ್ರೀಂ ಕೋರ್ಚ್‌ ಮುಕ್ತಾ​ಯ​ಗೊ​ಳಿ​ಸಿದ್ದು, ಮ್ಯಾಜಿ​ಸ್ಪ್ರೇಟ್‌ ಅಥವಾ ಹೈಕೋ​ರ್ಚ್‌ಗೆ ಹೋಗು​ವಂತೆ ಸೂಚಿಸಿದೆ. ಗುರು​ವಾರ ನ್ಯಾ.ಡಿ.​ವೈ.​ಚಂದ್ರ​ಚೂಡ್‌, ಪಿ.ಎ​ಸ್‌.​ನ​ರ​ಸಿಂಹ ಹಾಗೂ ಜೆ.ಬಿ.​ಪ​ರ್ಡಿ​ವಾಲಾ ಅವ​ರಿದ್ದ ಪೀಠ, ‘ಕು​ಸ್ತಿ​ಪ​ಟು​ಗಳ ಬೇಡಿ​ಕೆ​ಯಂತೆ ಬ್ರಿಜ್‌ ವಿರುದ್ಧ ಎಫ್‌​ಐ​ಆರ್‌ ದಾಖ​ಲಾ​ಗಿದೆ ಮತ್ತು ದೂರು​ದಾ​ರ​ರಿಗೆ ಪೊಲೀ​ಸ್‌ ರಕ್ಷ​ಣೆ ಒದ​ಗಿ​ಸ​ಲಾ​ಗಿ​ದೆ. ಹೀಗಾಗಿ ಅರ್ಜಿ ವಿಚಾ​ರಣೆ ಇಲ್ಲಿಗೆ ಕೊನೆ​ಗೊ​ಳಿ​ಸು​ತ್ತಿ​ದ್ದೇ​ವೆ. ಅಗ​ತ್ಯ​ವಿ​ದ್ದರೆ ಕೆಳ ನ್ಯಾಯಾ​ಲ​ಯದ ಮೊರೆ ಹೋಗ​ಬ​ಹು​ದು’ ಎಂದಿದೆ. 

ಈ ಬಗ್ಗೆ ಕುಸ್ತಿ​ಪ​ಟು​ಗಳು ಪ್ರತಿ​ಕ್ರಿ​ಯಿ​ಸಿದ್ದು, ಸುಪ್ರೀಂ ಆದೇ​ಶ​ದಿಂದ ಹಿನ್ನ​ಡೆ​ಯಾ​ಗಿಲ್ಲ. ನಮ್ಮ ಮುಂದೆ ಈಗ ಹಲವು ಆಯ್ಕೆಗಳಿವೆ. ಹಿರಿ​ಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊ​ಳ್ಳ​ಲಿ​ದ್ದೇವೆ. ಪ್ರತಿ​ಭ​ಟ​ನೆಯೂ ಮುಂದು​ವ​ರಿ​ಯ​ಲಿ​ದೆ’ ಎಂದಿ​ದ್ದಾರೆ.

Latest Videos
Follow Us:
Download App:
  • android
  • ios