ಬಾಂಗ್ಲಾದೇಶ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್'ನಲ್ಲಿ ಟೀಂ ಇಂಡಿಯಾ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ನವದೆಹಲಿ(ಜೂ.21): ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಪ್ರಶಸ್ತಿ ಗೆಲ್ಲದೇ ಇರಬಹುದು, ಆದರೆ ತಂಡದ ನಾಯಕ ಮೊಶ್ರಾಫೆ ಮೊರ್ತಾಜ ದೇಶದ ಜನರ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಜನರು ಕ್ರಿಕೆಟ್'ನ್ನು ದೇಶಪ್ರೇಮ ಎಂದು ಭಾವಿಸುವುದೇಕೆಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ ಡಾಕ್ಟರ್'ಗಳು, ರೈತರು ಹಾಗೂ ಕಾರ್ಮಿಕರು ದೇಶದ ನಿಜವಾದ ಹೀರೋಗಳು ಎಂದು ಮೊರ್ತಾಜ ಅಭಿಪ್ರಾಯಪಟ್ಟಿದ್ದಾರೆ.
ನಾನೊಬ್ಬ ಕ್ರಿಕೆಟಿಗ, ನನಗೆ ಒಂದು ಜೀವವನ್ನು ಉಳಿಸಲು ಸಾಧ್ಯವಿಲ್ಲ. ಆದರೆ ಡಾಕ್ಟರ್ ಆ ಕೆಲಸವನ್ನು ಮಾಡಬಲ್ಲ. ಆದರೆ ಆ ಮಹತ್ತರ ಕೆಲಸಕ್ಕೆ ಯಾರೂ ಚಪ್ಪಾಳೆ ತಟ್ಟುವುದಿಲ್ಲ. ಅದೇ ರೀತಿ ದೇಶಕ್ಕೆ ಅನ್ನ ಒದಗಿಸುವ ರೈತರು, ಕಟ್ಟಡ ಕಟ್ಟುವ ಕಾರ್ಮಿಕರು ದೇಶದ ನಿಜವಾದ ಸ್ಟಾರ್'ಗಳು ಎಂದು ಬಾಂಗ್ಲಾದೇಶ ನಾಯಕ ಹೇಳಿದ್ದಾರೆ.
ಕ್ರಿಕೆಟಿಗರಿಗೆ ಹಣ ಸಿಗುತ್ತೆ ಆಟವಾಡುತ್ತಾರೆ. ಕ್ರಿಕೆಟಿಗರೆಲ್ಲಾ ಕೇವಲ ಪ್ರದರ್ಶನ ನೀಡುವ ಕಲಾವಿದರಂತೆ. ಹಾಗಾಗಿ ಕ್ರಿಕೆಟಿಗರು ನಿಜವಾದ ಹೀರೋಗಳಲ್ಲ, ಅದರ ಬದಲು ದೇಶಕಟ್ಟುವ ರೈತರು, ಡಾಕ್ಟರ್, ಕಾರ್ಮಿಕರು ದೇಶದ ನಿಜವಾದ ಹೀರೋಗಳು ಎಂದು ಮೊಶ್ರಾಫೆ ಮೊರ್ತಾಜ ಹೇಳಿದ್ದಾರೆ.
ಮೊರ್ತಾಜ ಮಾತಿಗೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ...
ಬಾಂಗ್ಲಾದೇಶ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್'ನಲ್ಲಿ ಟೀಂ ಇಂಡಿಯಾ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
