ವ್ಯಂಗ್ಯದ ಮೂಲಕವೇ ಸ್ಮೋಕ್ ಮಾಡುವವರಿಗೆ ಮೊದಲ ಬಹುಮಾನ ಸಾವು, ಎರಡನೇ ಬಹುಮಾನ ಕ್ಯಾನ್ಸರ್, ಮೂರನೇ ಬಹುಮಾನ ಅಲ್ಸರ್, ನಾಲ್ಕನೇ ಬಹುಮಾನ ಅಸ್ತಮಾ ಹಾಗೂ ಸಮಾಧಾನಕರ ಬಹುಮಾನ ಕಫ. ಟಿಕೆಟ್'ಗಳು ಪಾನ್ ಅಂಗಡಿಗಳಲ್ಲಿ ಲಭ್ಯ, ಟಿಕೆಟ್ ಬೆಲೆ 5 ರಿಂದ 25. ಮುಖ್ಯ ಅತಿಥಿ ಯಮರಾಜ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಸ್ಫತ್ರೆಯನ್ನು ಸಂಪರ್ಕಿಸಿ ಎಂದು ಸಂದೇಶವಿರುವ ಚಿತ್ರವೊಂದನ್ನು ಟ್ವಿಟ್ಟರ್'ನಲ್ಲಿ ಹಂಚಿಕೊಂಡಿದ್ದಾರೆ.

ನವದೆಹಲಿ(ಮಾ.09): ಟ್ವೀಟರ್ ಮೂಲಕ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವ್ಯಂಗ್ಯವಾದರೂ ಅರ್ಥಪೂರ್ಣವಾದ ಸಂದೇಶವನ್ನು ರವಾನಿಸಿದ್ದಾರೆ.

ಹೌದು, ಇದೀಗ ಸಿಗರೇಟ್ ಸೇಯುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 'ಸ್ಮೋಕ್ ಅಂಡ್ ವಿನ್ ಪ್ರೈಜಸ್' ತಲೆಬರಹವಿರುವ ಸಂದೇಶ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ವ್ಯಂಗ್ಯದ ಮೂಲಕವೇ ಸ್ಮೋಕ್ ಮಾಡುವವರಿಗೆ ಮೊದಲ ಬಹುಮಾನ ಸಾವು, ಎರಡನೇ ಬಹುಮಾನ ಕ್ಯಾನ್ಸರ್, ಮೂರನೇ ಬಹುಮಾನ ಅಲ್ಸರ್, ನಾಲ್ಕನೇ ಬಹುಮಾನ ಅಸ್ತಮಾ ಹಾಗೂ ಸಮಾಧಾನಕರ ಬಹುಮಾನ ಕಫ. ಟಿಕೆಟ್'ಗಳು ಪಾನ್ ಅಂಗಡಿಗಳಲ್ಲಿ ಲಭ್ಯ, ಟಿಕೆಟ್ ಬೆಲೆ 5 ರಿಂದ 25. ಮುಖ್ಯ ಅತಿಥಿ ಯಮರಾಜ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಸ್ಫತ್ರೆಯನ್ನು ಸಂಪರ್ಕಿಸಿ ಎಂದು ಸಂದೇಶವಿರುವ ಚಿತ್ರವೊಂದನ್ನು ಟ್ವಿಟ್ಟರ್'ನಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದೊಂದಿಗೆ ಸೆಹ್ವಾಗ್, ದಯವಿಟ್ಟು ಸ್ಮೋಕ್ ಮಾಡಬೇಡಿ. ನಾವೆಲ್ಲ ಮನುಷ್ಯರು, ನೀವು ಹೊಗೆ ಬಿಡಲು ವಾಹನಗಳಲ್ಲ. ಆದ್ದರಿಂದ ಸ್ಮೋಕ್ ಮಾಡುವುದರಿಂದ ಹೊರಬನ್ನಿ ಎಂದು ಸಂದೇಶವನ್ನು ರವಾನಿಸಿದ್ದಾರೆ.

Scroll to load tweet…

ಸ್ಮೋಕಿಂಗ್ ದುಷ್ಪರಿಣಾಮದ ಬಗ್ಗೆ ಸೆಹ್ವಾಗ್ ಜಾಗೃತಿ ಮೂಡಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ತಿಂಗಳು 18ರಂದು ವ್ಯಕ್ತಿಯೊಬ್ಬನ ತಲೆಗೆ ಪಂಜರ ಹಾಕಿರುವ ದೃಶ್ಯವನ್ನು ಸೆಹ್ವಾಗ್ ಶೇರ್ ಮಾಡಿದ್ದಾರು. ಜತೆಗೆ ಈತ ತಲೆಗೆ ಪಂಜರ ಹಾಕಿಕೊಂಡು ಸ್ಮೋಕಿಂಗ್ ಬಿಡಲು ಪ್ರಯತ್ನಿಸುತ್ತಿದ್ದಾನೆ. ಈತನ ಪತ್ನಿ ಬಳಿ ಕೀ ಇದೆ, ಕೇವಲ ಊಟ ಮಾಡುವಾಗ ಮಾತ್ರ ಪಂಜರದ ಬಾಗಿಲು ತೆರೆಯಲಾಗುತ್ತದೆ ಎಂದು ಹೇಳಿ ಟ್ವೀಟ್ ಮಾಡಿದ್ದರು.

Scroll to load tweet…

ಸ್ಮೋಕಿಂಗ್ ದಾಸರಾದರೇ ಅದರಿಂದ ಹೊರಬರುವುದು ಸ್ವಲ್ಪ ಕಷ್ಟಕರ. ಹಾಗಾಗಿ, ಉತ್ತಮ ಆರೋಗ್ಯದ ದೃಷ್ಟಿಯಿಂದ ನೆರೆಹೊರೆಯವರ ಆರೋಗ್ಯದ ದೃಷ್ಟಿಯಿಂದ ಸ್ಮೋಕಿಂಗ್ ಬಿಡುವುದು ಒಳಿತು ಎನ್ನುವುದು ಸೆಹ್ವಾಗ್ ಮಾತಿನ ಮರ್ಮಾ.