1985ರ ವಿಶ್ವ ಚಾಂಪಿಯನ್‌'ಶಿಪ್‌ ಫೈನಲ್‌'ನಲ್ಲಿ ಉಭಯ ತಂಡಗಳು ಕೊನೆ ಬಾರಿಗೆ ಕಾದಾಡಿದ್ದವು.

ಬೆಂಗಳೂರು(ಜೂ.17): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 2007ರ ಟಿ20 ವಿಶ್ವಕಪ್‌ ಫೈನಲ್‌'ನಲ್ಲಿ ಭೇಟಿಯಾಗಿದ್ದರೂ, ಏಕದಿನ ಪಂದ್ಯಾವಳಿಯ ಫೈನಲ್‌'ನಲ್ಲಿ ಮುಖಾಮುಖಿಯಾಗಿದ್ದು ಮೂರು ದಶಕಗಳ ಹಿಂದೆ.

ಹೌದು ಭಾರತ-ಪಾಕಿಸ್ತಾನ ತಂಡಗಳು ಐಸಿಸಿ ಟೂರ್ನಿಯ ಏಕದಿನ ಫೈನಲ್ ಪಂದ್ಯದಲ್ಲಿ 32 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ.

1985ರ ವಿಶ್ವ ಚಾಂಪಿಯನ್‌'ಶಿಪ್‌ ಫೈನಲ್‌'ನಲ್ಲಿ ಉಭಯ ತಂಡಗಳು ಕೊನೆ ಬಾರಿಗೆ ಕಾದಾಡಿದ್ದವು.

ಆ ಟೂರ್ನಿಯಲ್ಲೂ ಭಾರತ, ತಾನಾಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿತ್ತು. ಆನಂತರ ಫೈನಲ್‌'ನಲ್ಲೂ ಗೆದ್ದು ಚಾಂಪಿಯನ್ ಆಗಿ ಮರೆದಾಡಿತ್ತು ಪಡೆದಿತ್ತು.

ಇದೀಗ ಮತ್ತೊಂದು ಅಂತಹದ್ದೇ ವೇದಿಕೆ ಸಿದ್ದವಾಗಿದ್ದು, ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮತ್ತೊಮ್ಮೆ ಚಾರಿತ್ರಿಕ ದಾಖಲೆ ಬರೆಯಲು ತುದಿಗಾಲಿನಲ್ಲಿ ನಿಂತಿದೆ. ಜೂನ್ 18ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ.