21ನೇ ಶತಮಾನದಲ್ಲಿ ವಾಖೆಂಡೆ ಮೈದಾನದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್'ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.  

ಕ್ರಿಕೆಟ್'ನಲ್ಲಿ ಕಾಕತಾಳಿಗಳು ಸಾಕಷ್ಟು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಮತ್ತೆ ಮೂರು ನಿದರ್ಶನಗಳು ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಕಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲನೆಯದಾಗಿ ಟೀಂ ಇಂಡಿಯಾದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 200ನೇ ಟೆಸ್ಟ್ ಪಂದ್ಯವನ್ನು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡಿದ್ದರು. ಇದೀಗ ಭಾರತ ತಂಡದ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ ತಮ್ಮ 200ನೇ ಏಕದಿನ ಪಂದ್ಯವಾಡಿದ್ದಾರೆ. ಇದನ್ನು ನೋಡಿದರೆ ಸಚಿನ್ ಅವರನ್ನೇ ಹಿಂಬಾಲಿಸುತ್ತಿದ್ದಾರೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ.

ವಿರಾಟ್ ಕೊಹ್ಲಿ ತಮ್ಮ 200ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಸ್ಮರಣೀಯವಾಸಿಕೊಂಡರೆ. ಅದೇ ರೀತಿ ಆಧುನಿಕ ಕ್ರಿಕೆಟ್ ಜಗತ್ತಿನ ಸೂಪರ್'ಸ್ಟಾರ್ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ 200ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದರು.

21ನೇ ಶತಮಾನದಲ್ಲಿ ವಾಖೆಂಡೆ ಮೈದಾನದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್'ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.