ಚೆನ್ನೈ[ಏ.28]: ಕತಾರ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ತಮಿಳುನಾಡು ಮೂಲದ ಅಥ್ಲೀಟ್ ಗೋಮತಿ ಮಾರಿಮುತ್ತುಗೆ ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷ ₹15 ಲಕ್ಷ ನಗದು ಬಹುಮಾನ ಘೋಷಿಸಿದೆ. 

ಗೋಮತಿ, ಮಹಿಳೆಯರ 800 ಮೀಟರ್ ಓಟದಲ್ಲಿ 2 ನಿಮಿಷ 02.70 ಸೆಕೆಂಡ್‌ನಲ್ಲಿ ಗುರಿ ಮುಟ್ಟುವ ಮೂಲಕ ಸ್ವರ್ಣಕ್ಕೆ ಮುತ್ತಿಟ್ಟಿದ್ದರು. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಗೋಮತಿಗೆ ₹10 ಲಕ್ಷ ಹಾಗೂ 4/400 ಮೀಟರ್ ಮಿಶ್ರ ರಿಲೇಯಲ್ಲಿ ಬೆಳ್ಳಿ ಜಯಿಸಿದ್ದ ಆರೋಕ್ಯ ರಾಜೀವ್'ಗೆ ₹5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. 

ಗೋಮತಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಥ್ಲೇಟಿಕ್ಸ್’ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.