ಸಿಡ್ನಿ(ಜ.02): ಟೆನಿಸ್‌ನ ಹೊಸ ಪರ್ವ ಎಂದೇ ಬಣ್ಣಿಸಲಾಗುತ್ತಿರುವ ‘ಎಟಿಪಿ ಕಪ್‌’ ತಂಡಗಳ ಚಾಂಪಿಯನ್‌ಶಿಪ್‌ ಶುಕ್ರವಾರದಿಂದ ಆಸ್ಪ್ರೇಲಿಯಾದಲ್ಲಿ ನಡೆಯಲಿದೆ. ಡೇವಿಸ್‌ ಕಪ್‌ ರೀತಿಯ ಜಾಗತಿಕ ಮಟ್ಟದ ಟೂರ್ನಿ ಇದಾಗಿದೆ. 

ಎಟಿಪಿ ರ‍್ಯಾಂಕಿಂಗ್’ನಲ್ಲಿ ಉನ್ನತ ಸ್ಥಾನದಲ್ಲಿರುವ ಆಟಗಾರ ಯಾವ ದೇಶಕ್ಕೆ ಸೇರುತ್ತಾನೋ, ಆ ದೇಶಕ್ಕೆ ಪ್ರವೇಶ ನೀಡಲಾಗಿದೆ. ಉದಾಹರಣೆ ಎಟಿಪಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಸರ್ಬಿಯಾಗೆ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿದೆ. ಈ ರೀತಿ ಒಟ್ಟು 24 ತಂಡಗಳು ಪ್ರವೇಶ ಪಡೆದಿವೆ. 

ತಲಾ 4 ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದೆ. ರೌಂಡ್‌ ರಾಬಿನ್‌ ಮಾದರಿ ಪ್ರಕಾರ ಒಟ್ಟು 8 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಜ.12ಕ್ಕೆ ಫೈನಲ್‌ ನಡೆಯಲಿದೆ. ಸ್ಪೇನ್‌, ಜರ್ಮನಿ, ಫ್ರಾನ್ಸ್‌ ಸೇರಿದಂತೆ ಪ್ರಮುಖ ತಂಡಗಳು ಕಣದಲ್ಲಿವೆ. ಭಾರತದ ಸಿಂಗಲ್ಸ್‌ ಆಟಗಾರರು ಎಟಿಪಿ ರಾರ‍ಯಂಕಿಂಗ್‌ ಪಟ್ಟಿಯ ಅಗ್ರ 100ರೊಳಗೆ ಸ್ಥಾನ ಪಡೆಯದ ಕಾರಣ, ಭಾರತ ತಂಡಕ್ಕೆ ಪ್ರವೇಶ ಸಿಕ್ಕಿಲ್ಲ.