ಬಾಕು(ಅಜೆರ್ಬೈಜಾನ್‌): 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭಾರತದ ತಾರಾ ಜಿಮ್ನಾಸ್ಟಿಕ್ಸ್‌ ಪಟು ದೀಪಾ ಕರ್ಮಕಾರ್‌ ಕನಸಿಗೆ ಪೆಟ್ಟು ಬಿದ್ದಿದೆ. 

ಇಲ್ಲಿ ನಡೆದ ವಿಶ್ವಕಪ್‌ ವೇಳೆ 25 ವರ್ಷದ ದೀಪಾ ಕಠಿಣ ಹ್ಯಾಂಡ್‌ಫ್ರಂಟ್‌ ವಾಲ್ಟ್‌ ಕಸರತ್ತು ಮಾಡಲು ಯುತ್ನಿಸಿದ ಕಾರಣ ಅವರ ಮಂಡಿ ನೋವು ಉಲ್ಬಣಿಸಿದೆ. ಈ ಕಾರಣದಿಂದಾಗಿ ಮುಂದಿನ ವಾರ ಕತಾರ್‌ನ ದೋಹಾದಲ್ಲಿ ನಡೆಯಲಿರುವ ವಿಶ್ವಕಪ್‌ನಿಂದ ಅವರು ಹಿಂದೆ ಸರಿಯಲಿದ್ದಾರೆ. 

ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ ಚಿನ್ನ ಗೆದ್ದ ದೀಪಾ ಕರ್ಮಾಕರ್‌

ದೀಪಾ ಭಾರತಕ್ಕೆ ಆಗಮಿಸಿ ಪುನೇಶ್ವೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ದೀಪಾಗೆ ಇನ್ನೂ ಅವಕಾಶ ಇದ್ದು, ಜೂನ್‌ ತಿಂಗಳಲ್ಲಿ ಮಂಗೋಲಿಯಾದಲ್ಲಿ ನಡೆಯಲಿರುವ ಏಷ್ಯನ್‌ ಚಾಂಪುಯನ್‌ಶಿಪ್‌ ಹಾಗೂ ಅಕ್ಟೋಬರ್‌ನಲ್ಲಿ ಜರ್ಮನಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರಬೇಕಿದೆ.

ರಿಯೊ ಒಲಿಂಪಿಕ್ಸ್’ನಲ್ಲಿ ಭಾಗವಹಿಸಿದ್ದ ದೀಪಾ ಕರ್ಮಾಕರ್ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದರು. ಆದರೆ ಫೈನಲ್’ನಲ್ಲಿ ಕೂದಲೆಳೆ ಅಂತರದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು.