ಹಿರಿಯ ಆರಂಭಿಕ ಬ್ಯಾಟ್ಸ್'ಮನ್ ಉಪುಲ್ ತರಂಗ ಏಕದಿನ ಹಾಗೂ ಟಿ20 ತಂಡವನ್ನು ಮುನ್ನಡೆಸಿದರೆ, ದಿನೇಶ್ ಚಂಡಿಮಾಲ್ ಶ್ರೀಲಂಕಾ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕೊಲಂಬೋ(ಜು.12): ಮೂರು ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ಆ್ಯಂಜಲೋ ಮ್ಯಾಥ್ಯೂಸ್ ರಾಜೀನಾಮೆ ನೀಡಿ ದಿನ ಕಳೆಯುವುದರೊಳಗಾಗಿ ಶ್ರೀಲಂಕಾ ತಂಡಕ್ಕೆ ನೂತನ ನಾಯಕರನ್ನು ನೇಮಕ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ಆರಂಭಿಕ ಬ್ಯಾಟ್ಸ್'ಮನ್ ಉಪುಲ್ ತರಂಗ ಏಕದಿನ ಹಾಗೂ ಟಿ20 ತಂಡವನ್ನು ಮುನ್ನಡೆಸಿದರೆ, ದಿನೇಶ್ ಚಂಡಿಮಾಲ್ ಶ್ರೀಲಂಕಾ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ರಂಗನಾ ಹೆರಾತ್ ಬಿಟ್ಟರೆ ಶ್ರೀಲಂಕಾ ಪರ ಅನುಭವಿ ಆಟಗಾರನೆನಿಸಿಕೊಂಡಿರುವ ಚಂಡಿಮಾಲ್, ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ತಮ್ಮ ಹೊಸ ಜವಬ್ದಾರಿ ಹೊರಲಿದ್ದಾರೆ.

ಇನ್ನು ಎಡಗೈ ಆರಂಭಿಕ ಬ್ಯಾಟ್ಸ್'ಮನ್ ಉಪುಲ್ ತರಂಗ ಭಾರತದ ವಿರುದ್ಧದ ಏಕದಿನ ಸರಣಿಯಿಂದ ತಂಡವನ್ನು ಮುನ್ನಡೆಸಲಿದ್ದಾರೆ.