ಪರ್ತ್(ಡಿ.12): ವಿಶ್ವ ಕ್ರಿಕೆಟಿಗರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಫಿಟ್ ಆಗಿದ್ದಾರೆ. ಇದಕ್ಕಾಗಿ ಕೊಹ್ಲಿ ಕಟ್ಟು ನಿಟ್ಟಿನ ಆಹಾರ ಪದ್ದತಿಯನ್ನ ಅಳವಡಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ವೇಳಾಪಟ್ಟಿ ಬಿಟ್ಟು ಇತರ ಯಾವುದೇ ಆಹಾರವನ್ನು ತೆಗೆದುಕೊಳ್ಳುವುದಿಲ್ಲ. ಇದೇ ಕಾರಣದಿಂದ ಕೊಹ್ಲಿ ಫಿಟ್ಟೆಸ್ಟ್ ಮ್ಯಾನ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗರ ಹೃದಯ ಗೆದ್ದ ವಿರುಷ್ಕಾ ಜೋಡಿಯ ತ್ಯಾಗ!

2008ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನ ಮುನ್ನಡೆಸಿದ ಕೊಹ್ಲಿ 2009ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಕೊಹ್ಲಿ 2012ರಲ್ಲಿ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ನೀಡಿದರು. ಹೀಗಾಗಿ ಸತತ 6 ವರ್ಷಗಳಿಂದ ಕೊಹ್ಲಿ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಐಪಿಎಲ್ ಹರಾಜು: ಮೂವರು ಸ್ಪಿನ್ನರ್ ಮೇಲೆ ಆರ್‌ಸಿಬಿ ಕಣ್ಣು!

ಕೊಹ್ಲಿ ದಿನನಿತ್ಯದ ಆಹಾರ ಪದ್ದತಿ:

ಬೆಳಗ್ಗೆ: ಸೊಪ್ಪು ತರಕಾರಿ ಹಾಗೂ ಚೀಸ್ ಜೊತೆಗೆ ಮೊಟ್ಟೆ, ಪ್ರೊಟಿನ್ ಯುಕ್ತ ಪೋಷಕಾಂಶ, ಬೇಯಿಸಿದ ಮಾಂಸ, ಹಣ್ಣುಗಳು, ನಟ್ಸ್ ಹಾಗೂ ಗ್ರೀನ್ ಟಿ

ಮಧ್ಯಾಹ್ನ: ಬೇಯಿಸಿದ ಕೋಳಿ ಮಾಂಸ, ಸೊಪ್ಪು ತರಕಾರಿ, ಬೇಯಿಸಿದ ಆಲೂಗಡ್ಡೆ, ಕೆಲದಿನ ಇತರ ಮಾಂಸ

ರಾತ್ರಿ: ಬೇಯಿಸಿದ ಸಮುದ್ರ ಮೀನು, ಸಿಗಡಿ, ಏಡಿ

ಕಟ್ಟು ನಿಟ್ಟಿನ ಆಹಾರ ಪದ್ದತಿ , ಜಿಮ್ ವರ್ಕೌಟ್ ಹಾಗೂ ಪ್ರತಿದಿನ ನೆಟ್ ಪ್ರಾಕ್ಟೀಸ್‌ನಿಂದ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.