ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡು ಪಂದ್ಯ ಗೆದ್ದಿತ್ತು. ಆದರೆ ನಿಜಕ್ಕೂ ಟಾಸ್ ಗೆದ್ದಿದ್ದು ಶ್ರೀಲಂಕಾ..!

ಕೊಲಂಬೊ(ಸೆ.07): ಕ್ರಿಕೆಟ್'ನಲ್ಲಿ ಟಾಸ್ ಸಾಕಷ್ಟು ಬಾರಿ ಪಂದ್ಯದ ಫಲಿತಾಂಶದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.

Add Asianetnews Kannada as a Preferred SourcegooglePreferred

ಶ್ರೀಲಂಕಾ ಹಾಗೂ ಭಾರತ ನಡುವಿನ ಏಕೈಕ ಟಿ20 ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್ ಆಗಿತ್ತೆ ಎಂಬ ಅನುಮಾನ ಮೂಡ ತೊಡಗಿವೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡು ಪಂದ್ಯ ಗೆದ್ದಿತ್ತು. ಆದರೆ ನಿಜಕ್ಕೂ ಟಾಸ್ ಗೆದ್ದಿದ್ದು ಶ್ರೀಲಂಕಾ..!

ಟಾಸ್ ವೇಳೆ ಉಭಯ ತಂಡದ ಆಟಗಾರರಿಗೆ ಮುರುಳಿ ಕಾರ್ತಿಕ್ ಔಪಚಾರಿಕವಾಗಿ ಮ್ಯಾಚ್ ರೆಫ್ರಿ ಆ್ಯಂಡಿ ಪೇಕ್ರಾಫ್ಟ್ ಎದುರು ಟಾಸ್ ಪರಿಚಯಿಸಿದರು.

ಶ್ರೀಲಂಕಾ ನಾಯಕ ಉಫುಲ್ ತರಂಗಾ ನಾಣ್ಯವನ್ನು ಟಾಸ್ ಮಾಡಿದರು. ಕೊಹ್ಲಿ ಹೆಡ್ ಆಯ್ದುಕೊಂಡರು. ರೆಫ್ರಿ 'ಟೇಲ್ಸ್ ಇಂಡಿಯಾ' ಎನ್ನುತ್ತಿದ್ದಂತೆ, ಕಾರ್ತಿಕ್ ಟೀಂ ಇಂಡಿಯಾ ನಾಯಕನ ನಿರ್ಧಾರವನ್ನು ಕೇಳಿದ್ದಾರೆ.

ಉಭಯ ನಾಯಕರಾಗಲೀ, ರೆಫ್ರಿಯಾಗಲೀ ಈ ಬಗ್ಗೆ ಚಕಾರವೆತ್ತದಿರುವುದು ಟಾಸ್ ಬಗ್ಗೆ ಫಿಕ್ಸಿಂಗ್ ಆಗಿತ್ತಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

ಹೀಗಿತ್ತು ಆ ಕ್ಷಣ..