ಇವತ್ತು ನಾಯಕನಿಗಿಂತ ಒಬ್ಬ ಆಟಗಾರ ಟೀಂ ಇಂಡಿಯಾಗೆ ವೆರಿ ಇಂಪಾರ್ಟೆಂಟ್. ಆತ ಫೀಲ್ಡ್​ನಲ್ಲಿದ್ದರೆ ಎದುರಾಳಿ ಪಾಳಯದಲ್ಲಿ ನಡುಕ ಶುರುವಾಗುತ್ತೆ. ಆತ ಒಂದಲ್ಲ ಎರಡಲ್ಲ ನಾಲ್ಕು ಕೆಲಸಗಳನ್ನುನ್ನ ಮಾಡ್ತಾನೆ. ಆತನ ಪ್ಲಾನ್​'ನಿಂದಲೇ ಟೀಂ ಇಂಡಿಯಾ ಫೈನಲ್​ಗೇರಿರುವುದು. ಇವತ್ತು ಭಾರತ ಚಾಂಪಿಯನ್ ಆಗಬೇಕಾದರೆ ಆತನ ಮಾಸ್ಟರ್ ಪ್ಲಾನ್ ವರ್ಕ್​ಔಟ್ ಆಗ್ಲೇ ಬೇಕು.

ಇವತ್ತು ನಾಯಕನಿಗಿಂತ ಒಬ್ಬ ಆಟಗಾರ ಟೀಂ ಇಂಡಿಯಾಗೆ ವೆರಿ ಇಂಪಾರ್ಟೆಂಟ್. ಆತ ಫೀಲ್ಡ್​ನಲ್ಲಿದ್ದರೆ ಎದುರಾಳಿ ಪಾಳಯದಲ್ಲಿ ನಡುಕ ಶುರುವಾಗುತ್ತೆ. ಆತ ಒಂದಲ್ಲ ಎರಡಲ್ಲ ನಾಲ್ಕು ಕೆಲಸಗಳನ್ನುನ್ನ ಮಾಡ್ತಾನೆ. ಆತನ ಪ್ಲಾನ್​'ನಿಂದಲೇ ಟೀಂ ಇಂಡಿಯಾ ಫೈನಲ್​ಗೇರಿರುವುದು. ಇವತ್ತು ಭಾರತ ಚಾಂಪಿಯನ್ ಆಗಬೇಕಾದರೆ ಆತನ ಮಾಸ್ಟರ್ ಪ್ಲಾನ್ ವರ್ಕ್​ಔಟ್ ಆಗ್ಲೇ ಬೇಕು.

ಕೀಪರ್, ಬ್ಯಾಟ್ಸ್​ಮನ್, ಮೆಂಟರ್​, ಕ್ಯಾಪ್ಟನ್

ಭಾರತ-ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಎಲ್ಲಾ 22 ಆಟಗಾರರಿಗೂ ಜವಾಬ್ದಾರಿ ಇರುತ್ತದೆ. ಅದರಲ್ಲೂ ಕ್ಯಾಪ್ಟನ್​'ಗಳಿಗೆ ಹೆಚ್ಚು. ಆದರೆ ನಾಯಕ ವಿರಾಟ್ ಕೊಹ್ಲಿಗಿಂತ ಹೆಚ್ಚು ಟೆನ್ಯನ್'​ನಲ್ಲಿ ಇರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಫೈಟ್​ಗೆ ನಾಯಕ ಕೊಹ್ಲಿಗಿಂತ ಹೆಚ್ಚು ಯೋಚಿಸುತ್ತಿರುವುದು ರಾಂಚಿ ಱಂಬೋ. ವಿರಾಟ್ ಕೊಹ್ಲಿ ಇನ್ನೂ ಅನಾನುಭವಿ ನಾಯಕ. ಮೊದಲ ಐಸಿಸಿ ಟೂರ್ನಿ. ಇಂತಹ ಮಹತ್ವದ ಟೂರ್ನಿಯಲ್ಲಿ ನಾಯಕನಿಗೆ ಮಾಜಿ ನಾಯಕನ ಸಹಕಾರ ಬೇಕೇ ಬೇಕು. ಕಳೆದ ನಾಲ್ಕೂ ಪಂದ್ಯಗಳಲ್ಲೂ ವಿಕೆಟ್ ಹಿಂದೆ, ಮುಂದೆ ಮಾತ್ರ ಧೋನಿ ಮಿಂಚಿದಲ್ಲ. ಮೆಂಟರ್ ಆಗಿಯೂ ಕ್ಲಿಕ್ ಆಗಿದ್ದಾರೆ.

ವಿಕೆಟ್ ಹಿಂದೆ ಧೋನಿ ಮಾಸ್ಟರ್ ಪ್ಲಾನ್

ಧೋನಿ ಕೇವಲ ವಿಕೆಟ್ ಕೀಪರ್ ಅಲ್ಲ. ವಿಕೆಟ್ ಹಿಂದೆ ಬರೀ ಕೀಪಿಂಗ್ ಮಾಡಿಕೊಂಡು ಕಾಲ ಕಳೆಯುವುದುಲ್ಲ. ಕ್ಯಾಪ್ಟನ್ ಕೊಹ್ಲಿ ಬೌಲಿಂಗ್​ ಬದಲಿಸುತ್ತಿದ್ದರೆ, ಇತ್ತ ವಿಕೆಟ್ ಹಿಂದೆ ನಿಂತುಕೊಂಡು ಮಹಿ, ಫೀಲ್ಡ್ ಸೆಟ್ ಮಾಡ್ತಿರ್ತಾರೆ. ಪ್ರತಿ ಬಾಲ್​ಗೂ ಫೀಲ್ಡ್ ಸೆಟ್​ ಮಾಡುವುದು ರಾಂಚಿ ಱಂಬೋನೇ. ಯಾವ್ಯಾವ ಬೌಲರ್​ ಹೇಗೇಗೆ ಬೌಲಿಂಗ್ ಮಾಡ್ತಾರೆ. ಎಲ್ಲಿ ಫೀಲ್ಡಿಂಗ್ ನಿಲ್ಲಿಸಿದ್ರೆ ರನ್ ನಿಯಂತ್ರಿಸಬಹುದು ಎನ್ನುವುದು ಮಹಿಗೆ ಗೊತ್ತಿದೆ.

ಕೊಹ್ಲಿ ಟಿಪ್ಸ್​.. ಎದುರಾಳಿಗೆ ಟ್ವಿಸ್ಟ್​..

ಕೇವಲ ಫೀಲ್ಡ್ ಮಾತ್ರ ಸೆಟ್​ ಮಾಡಲ್ಲ. ಎದುರಾಳಿ ತಂಡ ಸಿಕ್ಕಪಟ್ಟೆ ರನ್ ಹೊಡೆಯುತ್ತಿದ್ದರೆ, ಬೌಲಿಂಗ್​ ಚೇಂಜಸ್​ಗೂ ಕೈ ಹಾಕುತ್ತಾರೆರೆ. ಅದಕ್ಕೆ ಉತ್ತಮ ಉದಾಹರಣೆ ಬಾಂಗ್ಲಾದೇಶ ವಿರುದ್ಧ ಕೇದರ್ ಜಾಧವ್​ಗೆ ಬೌಲಿಂಗ್ ನೀಡಿದ್ದೇ ಧೋನಿ. ಅಮೇಲೆನೆ ಜಾಧವ್ ಜೊತೆಯಾಟ ಬ್ರೇಕ್ ಮಾಡಿದ್ದು. ಧೋನಿ ಬೌಲರ್ ಅಥ್ವಾ ಕ್ಯಾಪ್ಟನ್ ಕೊಹ್ಲಿ ಬಳಿ ಬಂದ್ರೆ ಸಾಕು ಎದುರಾಳಿ ಪಾಳಯದಲ್ಲಿ ನಡುಕ ಶುರುವಾಗುತ್ತೆ. ಯಾಕೆ ಗೊತ್ತಾ..? ನೆಕ್ಟ್ ವಿಕೆಟ್ ಬೀಳುತ್ತೆ ಅನ್ನೋದು ಪೆವಿಲಿಯನ್​ನಲ್ಲಿ ಕೂತ ಎದುರಾಳಿ ತಂಡಕ್ಕೆ ಖಚಿತವಾಗುತ್ತದೆ ಆ ಮಟ್ಟಕ್ಕೆ ಡೇಂಜರಸ್ ಮೆಂಟರ್ ಧೋನಿ.

ಪಾಕಿಸ್ತಾನಕ್ಕೂ ಧೋನಿ ಭಯ

2007ರ ಟಿ20 ವರ್ಲ್ಡ್​ಕಪ್​ನಲ್ಲಿ ಎರಡು ಪಂದ್ಯಗಳನ್ನ ಪಾಕ್ ಸೋತಿತ್ತು. ಆಗ ಧೋನಿಯೇ ನಾಯಕನಾಗಿದ್ದರು. ಅಷ್ಟು ಮಾತ್ರವಲ್ಲ, ಅಲ್ಲಿಂದ ಇಲ್ಲಿಯವರೆಗೂ ಐಸಿಸಿ ಟೂರ್ನಿಯಲ್ಲಿ ಪಾಕ್​ ಗೆಲ್ಲದಂತೆ ನೋಡಿಕೊಂಡಿರೋದು ಇದೇ ಧೋನಿ. ಹೀಗಾಗಿಯೇ ಪಾಕಿಸ್ತಾನಕ್ಕೆ ಮಹಿ ಅಂದ್ರೆ ಭಯ ಶುರುವಾಗಿದೆ. ಸ್ಫೋಟಕ ಬ್ಯಾಟ್ಸ್​ಮನ್, ತಾಣಾಕ್ಷ ವಿಕೆಟ್ ಕೀಪರ್. ಜೊತೆಗೆ ಮೆಂಟರ್ ಕೆಲ್ಸ ಬೇರೆ ಮಾಡ್ತಿದ್ದಾರೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ.

ಬ್ಯಾಟಿಂಗ್​ನಲ್ಲೂ ಪಾಕ್ ಕಾಡಿರುವ ಧೋನಿ

ಪಾಕ್ ವಿರುದ್ಧ ಕೇವಲ ನಾಯಕನಾಗಿ ಮಾತ್ರ ಮಹಿ ಕ್ಲಿಕ್ ಆಗಿಲ್ಲ. ಆಟಗಾರನಾಗಿಯೂ ಪಾಕಿಸ್ತಾನವನ್ನ ಕಾಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲ್ಕ ಪಾಕ್ ಬೌಲರ್​ಗಳನ್ನ ಚೆಂಡಾಡಿದ್ದಾರೆ. ಹೀಗಾಗಿಯೇ ಪಾಕ್​ಗೆ ಧೋನಿ ಭಯ ಶುರುವಾಗಿರೋದು.

ಪಾಕಿಸ್ತಾನ ವಿರುದ್ಧ 32 ಏಕದಿನ ಪಂದ್ಯಗಳನ್ನಾಡಿರುವ ಧೋನಿ, 58.38ರ ಸರಾಸರಿಯಲ್ಲಿ 1226 ರನ್ ಹೊಡೆದಿದ್ದಾರೆ. 2 ಶತಕ, 9 ಅರ್ಧಶತಕವನ್ನೂ ದಾಖಲಿಸಿದ್ದಾರೆ.