ಏಷ್ಯಾಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ಇದೀಗ ಫುಟ್ಬಾಲ್ ಪಂದ್ಯದತ್ತ ಚಿತ್ತ ಹರಿಸಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಧೋನಿ ಮುಂಬೈನಲ್ಲಿ ಫುಟ್ಬಾಲ್ ಪಂದ್ಯ ಆಡಿದ್ದಾರೆ. ಇಲ್ಲಿದೆ ಧೋನಿ ಫುಟ್ಬಾಲ್ ಪಂದ್ಯದ ವಿವರ.
ಮುಂಬೈ(ಅ.01): ಏಷ್ಯಾಕಪ್ ಟೂರ್ನಿ ಗೆಲುವಿನ ಬಳಿಕ ವಿಶ್ರಾಂತಿ ಜಾರಿದ್ದ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ಇದೀಗ ಚಾರಿಟಿ ಫುಟ್ಬಾಲ್ ಪಂದ್ಯ ಆಡೋ ಮೂಲಕ ಗಮನಸೆಳೆದಿದ್ದಾರೆ.
ಬಾಲಿವುಡ್ ಸೆಲೆಬ್ರೆಟಿಗಳಾದ ದಿನೋ ಮೋರಿಯಾ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನ್ಸ್ ಜೊತೆ ಎಂ.ಎಸ್ ಧೋನಿ ಚಾರಿಟಿ ಫುಟ್ಬಾಲ್ ಪಂದ್ಯ ಆಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ವಿಕೆಟ್ ಕೀಪಿಂಗ್‌ನಲ್ಲಿ ದಾಖಲೆ ಬರೆದಿದ್ದರು. ಇಷ್ಟೇ ಅಲ್ಲ ಏಕದಿನದಲ್ಲಿ 200ನೇ ಬಾರಿಗೆ ತಂಡವನ್ನ ಮುನ್ನಡಿಸಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ ಮತ್ತೆ ನಾಯಕನಾಗಿ ಕಣಕ್ಕಿಳಿದಿದ್ದರು.
